ದಲಿತ ಲೇಖಕರ 15 ಪುಸ್ತಕ ಪರಿಷತ್‌ನಿಂದ ಪ್ರಕಟ

7

ದಲಿತ ಲೇಖಕರ 15 ಪುಸ್ತಕ ಪರಿಷತ್‌ನಿಂದ ಪ್ರಕಟ

Published:
Updated:
ದಲಿತ ಲೇಖಕರ 15 ಪುಸ್ತಕ ಪರಿಷತ್‌ನಿಂದ ಪ್ರಕಟ

ಬೆಂಗಳೂರು: ರಾಜ್ಯದ ದಲಿತ ಲೇಖಕರ 15 ಪುಸ್ತಕಗಳನ್ನು ಪರಿಷತ್ತಿನ ವತಿಯಿಂದ ಪ್ರಕಟಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ತಿಳಿಸಿದರು.

ಪ್ರೊ.ಮಲ್ಲೇಪುರಂ ವೆಂಕಟೇಶ ಅವರ 67 ನೇ ಜನ್ಮದಿನದ ಅಂಗವಾಗಿ, ಕಲಬುರ್ಗಿಯ ಪ್ರೊ.ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಾ.ಶ್ರೀಶೈಲ ನಾಗರಾಳ ವಿರಚಿತ ‘ಶಾಸ್ತ್ರಚೂಡಾಮಣಿ ಪ್ರೊ.ಮಲ್ಲೇಪುರಂ’ ಮತ್ತು ಡಾ.ಎಂ.ಬಿ.ಕಟ್ಟಿ ವಿರಚಿತ ‘ಪ್ರೊ.ಮ್ಲಲೇಪುರಂ: ಸಹಸ್ಪಂದನ’ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ದಲಿತ ಸಾಹಿತ್ಯವನ್ನು ಹೆಚ್ಚೆಚ್ಚು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಆ ಕ್ಷೇತ್ರದ ಲೇಖಕರನ್ನು ಬೆಳೆಸುವ ಪ್ರಯತ್ನ ಸಾಹಿತ್ಯ ಪರಿಷತ್ತು ಮಾಡಲಿದೆ ಎಂದು ಅವರು ಹೇಳಿದರು.

ಅಖಿಲ ಭಾರತ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಅವರಿಗೆ ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ, ರಾಣಿ ಚನ್ನಮ್ಮ ವಿ.ವಿಯ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಪಿ ನಾಗರಾಜ ಅವರಿಗೆ ಶರಣ ಉರಿಲಿಂಗಪೆದ್ದಿ ಪುಸ್ತಕ ಬಹುಮಾನ, ಕನ್ನಡ ವಿ.ವಿಯ ಚರಿತ್ರೆ ವಿಭಾಗದ ‍ಪ್ರಾಧ್ಯಾಪಕ ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ ಅವರಿಗೆ ಮಹಾತ್ಮ ಜ್ಯೋತಿಬಾಪುಲೆ ಪುಸ್ತಕ ಬಹುಮಾನ, ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿ.ವಿಯ ಮೌಲ್ಯಮಾಪನಾ ಕುಲಸಚಿವ ಡಾ.ಸಿ.ಬಿ. ಹೊನ್ನಾಸಿದ್ಧಾರ್ಥ್ ಅವರಿಗೆ ಬಿ.ಶಾಮಸುಂದರ್ ಪುಸ್ತಕ ಬಹುಮಾನ, ಮತ್ತು ತುಮಕೂರು ವಿ.ವಿಯ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನಕೇಂದ್ರದ ಪ್ರಾಧ್ಯಾಪಕಿ ಡಾ.ಅಣ್ಣಮ್ಮ ಅವರಿಗೆ ರಮಾಬಾಯಿ ಅಂಬೇಡ್ಕರ್ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry