ಇದು ಅಡುಗೆ ಅರಮನೆ

7

ಇದು ಅಡುಗೆ ಅರಮನೆ

Published:
Updated:
ಇದು ಅಡುಗೆ ಅರಮನೆ

‘ಅಡುಗೆ ಅರಮನೆ ಶುದ್ಧ ಸಸ್ಯಾಹಾರಿ’ ಈ ಫೇಸ್‌ಬುಕ್‌ ಪೇಜಿನಲ್ಲಿ ಸಸ್ಯಾಹಾರಿ ಅಡುಗೆ ವಿಧಾನಗಳ ಬಗ್ಗೆ ಮಾಹಿತಿಗಳಿವೆ. ಗುಂಡ ಭಟ್ಟ ಜೋಯಿಸ ಎಂಬವರು ಪೇಜ್‌ ಅಡ್ಮಿನ್‌ ಆಗಿದ್ದಾರೆ. ಇದರಲ್ಲಿ ಪ್ರತಿದಿನ ಸದಸ್ಯರು ಹೊಸ ಹೊಸ ಅಡುಗೆಗಳನ್ನು ಮಾಡಿ ಚಿತ್ರಸಮೇತ ಅಡುಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.

‘ಅಡುಗೆ ಅರಮನೆ ಶುದ್ಧ ಸಸ್ಯಾಹಾರಿ /ADUGE ARAMANE’ ಫೇಸ್‌ಬುಕ್‌ ಪುಟಕ್ಕೆ ಭೇಟಿ ಕೊಟ್ಟರೆ ಅನೇಕ ಅಡುಗೆಗಳನ್ನು ಕಣ್ತುಂಬಿಕೊಳ್ಳಬಹುದು. ಈ ಗುಂಪಿನಲ್ಲಿ 65 ಸಾವಿರ ಸದಸ್ಯರಿದ್ದಾರೆ. ಕರ್ನಾಟಕದ ಉತ್ತರ, ದಕ್ಷಿಣ, ಕರಾವಳಿ ಭಾಗದ ವಿಭಿನ್ನ ಅಡುಗೆಗಳನ್ನು ನಾವು ಕಲಿಯಬಹುದು. ಈ ಫೇಸ್‌ಬುಕ್‌ ಪುಟದ ವಿಶೇಷ ಅಂದ್ರೆ ಆಯ್ಕೆಯಾದ ಕೆಲ ಸದಸ್ಯರು ವಾರ ಪೂರ್ತಿ ವಿಭಿನ್ನ ಅಡುಗೆಗಳನ್ನು ಮಾಡಿ, ಚಿತ್ರ ಸಮೇತ ಈ ಪುಟದಲ್ಲಿ ಹಂಚಿಕೊಳ್ಳಬೇಕು.

ಈ ಪುಟದಲ್ಲಿ ಎಲ್ಲಾ ಸದಸ್ಯರು ತಮಗೆ ಗೊತ್ತಿರುವ ಅಥವಾ ಹೊಸ ಪ್ರಯೋಗಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮಾಡುವ ವಿಧಾನ, ಸಾಮಗ್ರಿ ವಿವರ ಸೇರಿದಂತೆ ಎಲ್ಲಾ ವಿವರಗಳು ಹಾಗೂ ಚಿತ್ರಗಳನ್ನು ಸದಸ್ಯರು ಪೋಸ್ಟ್‌ ಮಾಡುತ್ತಾರೆ. ಈ ಫೇಸ್‌ಬುಕ್‌ ಪುಟಕ್ಕೆ ಭೇಟಿ ಕೊಟ್ಟರೆ ಆಯಾ ಋತುಮಾನಕ್ಕೆ ತಕ್ಕಂತಹ ಅಡುಗೆಗಳ ಮಾಹಿತಿಯನ್ನು ಪಡೆದು, ಮನೆಯಲ್ಲಿಯೇ ಮಾಡಿ ಹೊಸ ರುಚಿ ಸವಿಯಬಹುದು

ಫೇಸ್‌ಬುಕ್‌ ಕೊಂಡಿ– https://bit.ly/2JfLGio 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry