ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನಿಗೆ ತಿದ್ದುಪಡಿ ಅಗತ್ಯ

ಅಕ್ಷರ ಗಾತ್ರ

ಕರ್ನಾಟಕ ವಿಧಾನಸಭಾ ಚುನಾವಣೆಯು ಪಕ್ಷ ವಿರೋಧಿ ಫಲಿತಾಂಶವನ್ನು ನೀಡಿ, ಅತಂತ್ರ ವಿಧಾನಸಭಾ ರಚನೆಗೆ ಕಾರಣವಾಗಿದೆ. ಒಂದು ಸರ್ಕಾರ ರಚನೆಯಾಗಲೂ ದೇಶದ, ರಾಜ್ಯದ ಸಂಸತ್ತು ಹಾಗೂ ವಿಧಾನಸಭಾ ಸ್ಥಾನದ ಗರಿಷ್ಠ ಸಂಖ್ಯೆಯ ಅರ್ಧಕ್ಕಿಂತ ಹೆಚ್ಚಿರಬೇಕು.

ನಮ್ಮ ಸಂವಿಧಾನವು ಪಕ್ಷ ಪದ್ಧತಿ ಸರ್ಕಾರವನ್ನು ರಚಿಸಲು ಮಾನ್ಯ ಮಾಡಿದೆ. ಆದರೆ ಇಂತಹ (ಕರ್ನಾಟಕದಂತಹ) ಫಲಿತಾಂಶ ಬಂದಾಗ ಸಮ್ಮಿಶ್ರ ಸರ್ಕಾರದ ರಚನೆಗೆ ಕಾರಣವಾಗುತ್ತದೆ. ಚುನಾವಣಾಪೂರ್ವದಲ್ಲಿ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡರೆ ಸಮ್ಮಿಶ್ರ ಸರ್ಕಾರದ ರಚನೆಯ ಕಲ್ಪನೆ ಒಳ್ಳೆಯದು ಇರಬಹುದು. ಅದನ್ನು ಹೊರತುಪಡಿಸಿ ಚುನಾವಣೋತ್ತರ ಹೊಂದಾಣಿಕೆ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಬೆಳವಣಿಗೆಯಲ್ಲ.

ಆದ್ದರಿಂದ ತಾಂತ್ರಿಕವಾಗಿ ಕನಿಷ್ಠ ಸರಳ ಬಹುಮತ ಪಡೆಯದ ಸಂದರ್ಭದಲ್ಲಿ ರಾಜ್ಯದ ಒಟ್ಟು ಮತದಾನದಲ್ಲಿ ಶೇಕಡಾವಾರು ‘ಅಧಿಕ ಮತ’ ಪಡೆದ ಪಕ್ಷವು ಸರ್ಕಾರ ರಚಿಸುವಂತಾಗುವಂತೆ ಕಾನೂನಿಗೆ ತಿದ್ದುಪಡಿ ತರುವುದು ಒಳಿತು. ಆ ಮೂಲಕ ಪ್ರಜಾಪ್ರಭುತ್ವವನ್ನು ರಕ್ಷಿಸುವಂತಾಗಬೇಕು. ಶೇಕಡಾವಾರು ಅಧಿಕ ಮತ ಪಡೆದ ಪಕ್ಷವನ್ನು ಚುನಾಚವಣಾ ಆಯೋಗ ಮಾನ್ಯ ಮಾಡಲಿ. ಸರ್ಕಾರ ರಚನೆಗೆ ಅಗತ್ಯ ಶಾಸಕರ ಕೊರತೆಯುಂಟಾದಾಗ ಅಧಿಕ ಮತ ಪಡೆದ ಪಕ್ಷದ ಚುನಾಯಿತ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಸಹಕಾರದಿಂದ ಸರ್ಕಾರ ರಚನೆಯಾಗಲಿ. ಅಧಿಕ ಮತ ಪಡೆದ ಪಕ್ಷಕ್ಕೆ ಆದ್ಯತೆಯ ಮೇಲೆ ಸರ್ಕಾರ ರಚಿಸಲು ಅವಕಾಶ ದೊರೆತರೆ, ಕುದುರೆ ವ್ಯಾ‍ಪಾರಕ್ಕೆ ಕಡಿವಾಣ ಬೀಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT