ಕರಡಿ ದಾಳಿ: ಸಾವು

7

ಕರಡಿ ದಾಳಿ: ಸಾವು

Published:
Updated:

ಖಾನಾಪುರ: ಸಮೀಪದ ಕೌಂದಲ್‌ ಗ್ರಾಮದ ಹೊರವಲಯದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ರೈತ ಗಣಪತಿ ಅಣ್ಣು ಪಾಟೀಲ (55) ಮೇಲೆ ಬುಧವಾರ ಕರಡಿಯೊಂದು ದಾಳಿ ನಡೆಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ.

ಗಣಪತಿ ಅವರು ಮಧ್ಯಾಹ್ನ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಹಠಾತ್ತನೇ ಎರಗಿದ ಕರಡಿ ಅವರ ಮುಖ, ಕುತ್ತಿಗೆ, ಮೈಯನ್ನೆಲ್ಲ ಪರಚಿ ಗಾಯಗೊಳಿಸಿದೆ. ಅವರ ಚೀರಾಟ ಕೇಳಿ, ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ನೆರವಿಗೆ ಧಾವಿಸಿದ್ದಾರೆ. ಆಗ ಕರಡಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡ ಗಣಪತಿ ಅವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ನಂತರ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry