ಪ್ರಾಂಶುಪಾಲ, ಗ್ರಾ.ಪಂ ಸದಸ್ಯ ಬಂಧನ

7

ಪ್ರಾಂಶುಪಾಲ, ಗ್ರಾ.ಪಂ ಸದಸ್ಯ ಬಂಧನ

Published:
Updated:
ಪ್ರಾಂಶುಪಾಲ, ಗ್ರಾ.ಪಂ ಸದಸ್ಯ ಬಂಧನ

ಕುಶಾಲನಗರ (ಕೊಡಗು ಜಿಲ್ಲೆ): ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಪರವಾಗಿ ಮತದಾರ ಶಿಕ್ಷಕರಿಗೆ ಹಣ ಹಂಚುತ್ತಿದ್ದ ಇಬ್ಬರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಹೆಬ್ಬಾಲೆ ಖಾಸಗಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎನ್.ಎನ್.ಧರ್ಮಪ್ಪ ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಕೆ.ವಿಶ್ವನಾಥ್ ಬಂಧಿತರು.

ಕುಶಾಲನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಶಿಕ್ಷಕರಿಗೆ ಕರಪತ್ರದ ಜೊತೆಗೆ ಕವರ್‌ನಲ್ಲಿ ₹500 ಮುಖಬೆಲೆಯ ಎರಡು ನೋಟುಗಳನ್ನು ಇಟ್ಟು ಹಂಚುತ್ತಿದ್ದ ವೇಳೆ ಬಂಧಿಸಲಾಗಿದೆ. ಚುನಾವಣಾಧಿಕಾರಿ ಧರ್ಮರಾಜ್, ಸಹಾಯಕ ಚುನಾವಣಾಧಿಕಾರಿ ಟಿ.ಪಿ.ಸತ್ಯ ನೇತೃತ್ವದಲ್ಲಿ ಕಾರು ಪರಿಶೀಲಿಸಿ ಪ್ರಚಾರ ಸಾಮಗ್ರಿ, ₹ 40 ಸಾವಿರ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry