ತಮಿಳುನಾಡು ಮಾಜಿ ಸಚಿವನಿಗೆ 5 ವರ್ಷ ಜೈಲು

7

ತಮಿಳುನಾಡು ಮಾಜಿ ಸಚಿವನಿಗೆ 5 ವರ್ಷ ಜೈಲು

Published:
Updated:

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಸಚಿವ ಹಾಗೂ ಎಐಎಡಿಎಂಕೆ ಮುಖಂಡ ವಿ.ಸತ್ಯಮೂರ್ತಿ ಅವರಿಗೆ ಮದ್ರಾಸ್‌ ಹೈಕೋರ್ಟ್‌ ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ಕೆಳ ಹಂತದ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ನ್ಯಾಯಮೂರ್ತಿ ಜಿ.ಜಯಚಂದ್ರನ್‌ ಅವರು ಸತ್ಯಮೂರ್ತಿಯವರ ಪತ್ನಿಗೂ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ, ಈ ದಂಪತಿಗೆ ತಲಾ ₹2 ಲಕ್ಷ ದಂಡ ವಿಧಿಸಲಾಗಿದೆ.

ಜೆ.ಜಯಲಲಿತಾ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸರ್ಕಾರದಲ್ಲಿ ಸತ್ಯಮೂರ್ತಿ 1993ರಿಂದ 1996ರವರೆಗೆ ವಾಣಿಜ್ಯ ತೆರಿಗೆ ಸಚಿವರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry