ರಷ್ಯಾಗೆ ಪಯಣಿಸದಿರಲು ಸಲಿಂಗಿಗಳ ನಿರ್ಧಾರ

7

ರಷ್ಯಾಗೆ ಪಯಣಿಸದಿರಲು ಸಲಿಂಗಿಗಳ ನಿರ್ಧಾರ

Published:
Updated:

ಮಾಸ್ಕೊ: ವಿಶ್ವಕಪ್ ಫುಟ್‌ಬಾಲ್ ವೀಕ್ಷಿಸಲು ಸಲಿಂಗಿಗಳಿಗೆ ಮುಕ್ತ ಅವಕಾಶ ಇದೆ ಎಂದು ರಷ್ಯಾ ಹೇಳಿದ್ದರೂ ಆ ದೇಶಕ್ಕೆ ಪಯಣಿಸದೇ ಇರಲು ಸಲಿಂಗಿಗಳು ನಿರ್ಧರಿಸಿದ್ದಾರೆ. ಸಲಿಂಗ ವಿರೋಧ ಕಾನೂನು ಜಾರಿಯಲ್ಲಿರುವ ಮತ್ತು ಪೊಲೀಸರೇ ದೌರ್ಜನ್ಯ ಎಸಗುವ ರಾಷ್ಟ್ರಕ್ಕೆ ತೆರಳಲು ನಾವು ಸಿದ್ಧ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ತೆರಳಲು ಇಷ್ಟ ಇರುವವರನ್ನು ತಡೆಯುವ ಪ್ರಯತ್ನಗಳೂ ನಡೆಯುತ್ತಿವೆ.

ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ರಷ್ಯಾಗೆ ತೆರಳುವುದಾಗಿ ಹೇಳಿದ್ದ ಇಂಗ್ಲೆಂಡ್‌ನ ಸಲಿಂಗ ಸಂಘವೊಂದರ ಮುಖ್ಯಸ್ಥೆ ಡಿ ಕನ್ಹಿಂಗ್ಯಾಮ್‌ ಅವರಿಗೆ ಅನಾಮಧೇಯ ಇ ಮೇಲ್ ಸಂದೇಶ ಬಂದಿದ್ದು ಸಂಘಟನೆಯ ಯಾರು ಕೂಡ ವಿಶ್ವಕಪ್‌ಗೆ ತೆರಳಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಇದೇ ರೀತಿಯ ಮತ್ತೊಂದು ಇ ಮೇಲ್‌ನಲ್ಲಿ ವ್ಯಕ್ತಿಯೊಬ್ಬರು ಚಾಕು ಹಿಡಿದುಕೊಂಡು ಬೆದರಿಸುತ್ತಿರುವ ಚಿತ್ರವನ್ನು ಲಗತ್ತಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry