ಶಾಲಾ, ಕಾಲೇಜುಗಳಲ್ಲಿಯೇ ಬಸ್‌ ಪಾಸ್‌ ವಿತರಣೆ

7

ಶಾಲಾ, ಕಾಲೇಜುಗಳಲ್ಲಿಯೇ ಬಸ್‌ ಪಾಸ್‌ ವಿತರಣೆ

Published:
Updated:
ಶಾಲಾ, ಕಾಲೇಜುಗಳಲ್ಲಿಯೇ ಬಸ್‌ ಪಾಸ್‌ ವಿತರಣೆ

ಬೆಂಗಳೂರು: ಬಸ್‌ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಶಾಲಾ, ಕಾಲೇಜುಗಳಲ್ಲಿಯೇ ಬಸ್‌ ಪಾಸ್‌ ನೀಡುವ ವ್ಯವಸ್ಥೆ ಮಾಡಲಾಗಿದೆ.

ಶಾಲಾ, ಕಾಲೇಜಿನ ನೋಡಲ್ ಅಧಿಕಾರಿಗಳು ಶಿಕ್ಷಣ ಇಲಾಖೆಯ ಎಸ್‌ಎಟಿಎಸ್ ವೆಬ್‌ ಇಂಟರ್‌ಫೇಸ್‌ ಅಥವಾ ಮೊಬೈಲ್ ಇಂಟರ್‌ಫೇಸ್‌ನಲ್ಲಿ ‘ವಿದ್ಯಾರ್ಥಿ ಪಾಸ್‌ ಪಡೆಯುವರೇ’ ಎಂಬ ಕಾಲಂನಲ್ಲಿ ‘yes' ಎಂದು ನಮೂದಿಸಬೇಕು. ನಂತರ ವಿದ್ಯಾರ್ಥಿಗಳ ಪ್ರಯಾಣದ ವಿವರಗಳನ್ನು ಭರ್ತಿ ಮಾಡಿ ಕಳಿಸಬೇಕು. ಈ ರೀತಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಬಿಎಂಟಿಸಿ ಪಾಸ್‌ಗಳನ್ನು ವಿತರಿಸಲಿದೆ.

ಒಂದನೇ ತರಗತಿಯಿಂದ ಪ್ರಥಮ ಪಿಯುಸಿವರೆಗೆ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಪಡೆದುಕೊಂಡಿರುವ ಪಾಸ್‌ಗಳಲ್ಲಿಯೇ ಜೂನ್‌ 30ರವರೆಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಹಿಂದಿನ ವರ್ಷದ ಪಾಸ್‌ ಕಳೆದುಕೊಂಡಿರುವ ವಿದ್ಯಾರ್ಥಿಗಳು ಹಾಗೂ ಪ್ರಸಕ್ತ ವರ್ಷದಲ್ಲಿ ಹೊಸದಾಗಿ ಪಾಸ್‌ ಪಡೆಯುವ ವಿದ್ಯಾರ್ಥಿಗಳು ಕಾಲೇಜಿನ ದಾಖಲಾತಿ ವಿವರಗಳೊಂದಿಗೆ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಪಾಸ್ ಪಡೆಯಬಹುದು. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ಕ್ರಮವಾಗಿ ಜೂನ್‌ 8 ಹಾಗೂ ಜೂನ್‌ 11ರೊಳಗೆ ಪಾಸ್ ಪಡೆಯಬೇಕು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry