ಪತ್ರಕರ್ತ ದಿನೇಶ ಅಮೀನ್‌ ಮಟ್ಟು ಕೊಲೆಗೆ ಪ್ರಚೋದನೆ; ಭಾಸ್ಕರ್ ಪ್ರಸಾದ್ ಬಂಧನ

7

ಪತ್ರಕರ್ತ ದಿನೇಶ ಅಮೀನ್‌ ಮಟ್ಟು ಕೊಲೆಗೆ ಪ್ರಚೋದನೆ; ಭಾಸ್ಕರ್ ಪ್ರಸಾದ್ ಬಂಧನ

Published:
Updated:

ಬೆಂಗಳೂರು: ಹಿರಿಯ ಪತ್ರಕರ್ತ ದಿನೇಶ ಅಮೀನ್‌ ಮಟ್ಟು ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಪ್ರಕಟಿಸಿ, ಅವರ ಕೊಲೆಗೆ ಪ್ರಚೋದಿಸುತ್ತಿದ್ದ ಆರೋಪದಡಿ ಭಾಸ್ಕರ್‌ಪ್ರಸಾದ್ ಎಂಬುವರನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲದ ಭಾಸ್ಕರ್‌ಪ್ರಸಾದ್ ವಿರುದ್ಧ ದಿನೇಶ್‌ ಅವರು ಜೂನ್ 1ರಂದು ದೂರು ನೀಡಿದ್ದರು. ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ. ಸದ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದ ಆರೋಪಿ, ‘ತನ್ನ ವಿರೋಧಿಯೊಬ್ಬನ ಕೊಲೆಗೆ ಸಂಚು ರೂಪಿಸಿದ್ದ ದಿನೇಶ ಅಮೀನ್ ಮಟ್ಟು. ವಿವರಗಳಿಗಾಗಿ ನಿರೀಕ್ಷಿಸಿ’ ಎಂದಿದ್ದರು. ಈ ಪೋಸ್ಟ್‌ ವೈರಲ್‌ ಆಗಿತ್ತು. ನಂತರ ದೂರು ಕೊಟ್ಟಿದ್ದ ದಿನೇಶ್, ‘ನನ್ನ ವಿರುದ್ಧ ನಿರಾಧಾರವಾದ ಆರೋಪ ಮಾಡುತ್ತಿರುವ ಭಾಸ್ಕರ್‌ ಪ್ರಸಾದ್, ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿಸುತ್ತಿದ್ದಾನೆ. ಹಲ್ಲೆ, ಕೊಲೆ ಯತ್ನ ನಡೆಸಲು ಪ್ರಚೋದಿಸುತ್ತಿದ್ದಾನೆ’ ಎಂದು ಆರೋಪಿಸಿದ್ದರು ಎಂದು ಪೊಲೀಸರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry