ಬಂದ್‌: ಅರ್ಜಿ ವಿಲೇವಾರಿ

7

ಬಂದ್‌: ಅರ್ಜಿ ವಿಲೇವಾರಿ

Published:
Updated:

ಬೆಂಗಳೂರು: ‘ಬಂದ್‌ ಸಂದರ್ಭದಲ್ಲಿ ಉಂಟಾಗುವ ಆಸ್ತಿಪಾಸ್ತಿ ನಷ್ಟಕ್ಕೆ, ಬಂದ್‌ ಕರೆ ಕೊಡುವ ಸಂಘಟನೆ ಹಾಗೂ ರಾಜಕೀಯ ಪಕ್ಷಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಅರ್ಜಿದಾರರು ಹಿಂಪಡೆದಿದ್ದಾರೆ.

ಜಯನಗರ ನಿವಾಸಿ ಪಿ.ಕೆ. ನವೀನ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಲೇವಾರಿ ಮಾಡಿತು.

ವಿಚಾರಣೆ ವೇಳೆ ನ್ಯಾಯಪೀಠ, ‘ಈಗಾಗಲೇ ಇಂತಹುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಎರಡು ಆದೇಶ ಹೊರಡಿಸಲಾಗಿದೆ. ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ಯಾಕೆ ಪದೇ ಪದೇ ಪಿಐಎಲ್ ಸಲ್ಲಿಸುತ್ತೀರಾ? ಕರ್ನಾಟಕ ಶಾಂತಿಯುತ ರಾಜ್ಯವಲ್ಲವೇ’ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.

‘ಈ ಕುರಿತಂತೆ ಸುಪ್ರೀಂ ಕೋರ್ಟ್ ಆದೇಶಗಳೂ ಸ್ಪಷ್ಟವಾಗಿವೆಯೆಲ್ಲಾ. ಇದು ಒಳ್ಳೆಯ ಪಿಐಎಲ್ ಏನೊ ಹೌದು. ಆದರೆ, ರೈತರು ಬಂದ್ ನಡೆಸಿದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರವಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಎ.ಎಸ್‌.ಪೊನ್ನಣ್ಣ, ‘ಬಂದ್ ವೇಳೆ ಸಾರ್ವಜನಿಕರ ಪ್ರಾಣ, ಆಸ್ತಿಪಾಸ್ತಿ ರಕ್ಷಣೆಗೆ ಸರ್ಕಾರ ಯಾವತ್ತೂ ಬದ್ದವಾಗಿದೆ’ ಎಂದು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry