ಸರಗಳ್ಳರ ಬಗ್ಗೆ ಪೊಲೀಸರಿಂದ ಜಾಗೃತಿ

7

ಸರಗಳ್ಳರ ಬಗ್ಗೆ ಪೊಲೀಸರಿಂದ ಜಾಗೃತಿ

Published:
Updated:
ಸರಗಳ್ಳರ ಬಗ್ಗೆ ಪೊಲೀಸರಿಂದ ಜಾಗೃತಿ

ಬೆಂಗಳೂರು: ಸರಗಳ್ಳರ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್‌ ಇಲಾಖೆ ನಗರದಾದ್ಯಂತ ಅಭಿಯಾನ ಹಮ್ಮಿಕೊಂಡಿದೆ. ಉದ್ಯಾನ, ದೇವಸ್ಥಾನ ಮತ್ತು ಜನವಸತಿ ಪ್ರದೇಶಗಳಿಗೆ ಪೊಲೀಸರು ಭೇಟಿ ನೀಡಿ, ಸಾರ್ವಜನಿಕರಿಗೆ ಮಾಹಿತಿ, ಸಲಹೆಗಳನ್ನು ನೀಡುತ್ತಿದ್ದಾರೆ.

ಸರ, ಬೈಕ್‌ ಕಳ್ಳರ ಬಗ್ಗೆ ಎಚ್ಚರವಹಿಸುವ ಬಗ್ಗೆ ಮಾಹಿತಿ ಫಲಕಗಳನ್ನು ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಳವಡಿಸಲಾಗುತ್ತಿದೆ. ‘ವಿಳಾಸ ಕೇಳುವ ನೆಪದಲ್ಲಿ ಕೊರಳಲ್ಲಿರುವ ಮಾಂಗಲ್ಯ, ಚಿನ್ನದ ಸರ ಕಸಿದುಕೊಂಡು ಹೋಗುವವರ ಬಗ್ಗೆ ಎಚ್ಚರದಿಂದಿರಬೇಕು’ ಎಂದು ಮಾಹಿತಿ ಫಲಕದಲ್ಲಿದೆ.

‘ನಾವು ಮಫ್ತಿಯಲ್ಲಿರುವ ಪೊಲೀಸರು ಎಂದು ನಂಬಿಸಿ ಒಡವೆಗಳನ್ನು ತೆಗೆಸಿ ಮೋಸ ಮಾಡುವವರ ಬಗ್ಗೆ ಮತ್ತು ರಸ್ತೆಯಲ್ಲಿ ನಡೆದು ಹೋಗುವಾಗ ಎದುರು ಮತ್ತು ಹಿಂದಿನಿಂದ ದ್ವಿಚಕ್ರ ವಾಹನಗಳಲ್ಲಿ ಬಂದು ಚಿನ್ನದ ಸರ, ಮಾಂಗಲ್ಯ ಅಪಹರಣ ಮಾಡುವವರ ಬಗ್ಗೆ ಎಚ್ಚರದಿಂದಿರಿ’ ಎಂದು ತಿಳಿಸಲಾಗಿದೆ.

‘ಸರಗಳ್ಳತನ ನಡೆಯುತ್ತಿದೆ ಎನ್ನುವುದು ಅರಿವಿಗೆ ಬಂದ ತಕ್ಷಣ ಭಯ ಬಿಟ್ಟು ಪ್ರತಿರೋಧ ವ್ಯಕ್ತಪಡಿಸಿ, ಒಡವೆಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿ, ಮನೆಯಿಂದ ಹೊರಗೆ ಹೋಗುವಾಗ ಮನೆಯನ್ನು ಖಾಲಿ ಬಿಡದೆ, ಮನೆಯಲ್ಲಿ ವಾಸ ಮಾಡಲು ಬಂಧುಗಳಿಗೆ ತಿಳಿಸಿ, ಆಭರಣಗಳನ್ನು ಬ್ಯಾಂಕ್‌ ಲಾಕರ್‌ನಲ್ಲಿಡಿ’ ಎನ್ನುವ ಸಲಹೆಗಳು ಮಾಹಿತಿ ಫಲಕದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry