ವ್ಯಾನಿಟಿ ಬ್ಯಾಗ್‌ ಕದ್ದವನ್ನೊಬ್ಬ ಮದುವೆ ಪ್ರಸ್ತಾವ ಇಟ್ಟವನ್ನೊಬ್ಬ!

7

ವ್ಯಾನಿಟಿ ಬ್ಯಾಗ್‌ ಕದ್ದವನ್ನೊಬ್ಬ ಮದುವೆ ಪ್ರಸ್ತಾವ ಇಟ್ಟವನ್ನೊಬ್ಬ!

Published:
Updated:

ಬೆಂಗಳೂರು: ವ್ಯಾನಿಟಿಬ್ಯಾಗ್‌ ಕಳೆದುಕೊಂಡು ಚಿಂತೆಯಲ್ಲಿದ್ದ ವಿವಾಹಿತ ಮಹಿಳೆಯ ಮೊಬೈಲ್‌ಗೆ ಎರಡು ದಿನಗಳ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಮದುವೆ ಪ್ರಸ್ತಾವ ಇಡುವ ಮೂಲಕ ಮತ್ತೊಂದು ಶಾಕ್‌ ನೀಡಿದ ಪ್ರಕರಣ ಇಂದಿರಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಬಗ್ಗೆ 4ನೇ ಮುಖ್ಯರಸ್ತೆ, 10ನೇ ಕ್ರಾಸ್ ನಿವಾಸಿ ಮೇರಿ (ಹೆಸರು ಬದಲಿಸಲಾಗಿದೆ) ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬೆನ್ನುಹತ್ತಿದ ಪೊಲೀಸರು ಬ್ಯಾಗ್‌ ಕದ್ದ ಕಳ್ಳನೇ ಮದುವೆಯ ಪ್ರಸ್ತಾವ ಇಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿ, ಆ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದು, ಅವರಿಗೆ ಅಚ್ಚರಿ ಕಾದಿತ್ತು.

ಆ ಮೊಬೈಲ್‌ ಸಂಖ್ಯೆ ಜಾರ್ಖಂಡ್‌ ಮೂಲದ ವ್ಯಕ್ತಿಯದ್ದಾಗಿತ್ತು. ಈತ ಕರೆ ಮಾಡಿರುವುದಕ್ಕೂ ಮತ್ತುಬ್ಯಾಗ್‌ ಕಳೆದು ಕೊಂಡಿರುವುದಕ್ಕೂ ತಾಳೆ ಆಗುತ್ತಿರಲಿಲ್ಲ. ಬ್ಯಾಗ್‌ ಕಳೆದು

ಹೋದ ದಿನವೇ ಆತನಿಂದ ಮೇರಿ ಅವರಿಗೆ ಕರೆ ಬಂದಿದ್ದು, ಇದು ಕಾಕತಾಳೀಯ ಎಂದು ತೀರ್ಮಾನಿಸಿದ ಪೊಲೀಸರು ಅಸಲಿ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.

ಘಟನೆ ವಿವರ‌: ‘ವಸಂತ ನಗರದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ಮೇರಿ ಮೇ 16ರಂದು ರಾತ್ರಿ ಹೋಟೆಲ್‌ನಿಂದ ಕ್ಯಾಬ್‌ನಲ್ಲಿ ಇಂದಿರಾ

ನಗರದ 7ನೇ ಮುಖ್ಯರಸ್ತೆ, 2ನೇ ಕ್ರಾಸ್‌ನಲ್ಲಿ ಇಳಿದು ಮನೆಗೆ ನಡೆದುಕೊಂಡು ಹೋಗುವಾಗ ಬೈಕ್‌ವೊಂದರ ಶೋ ರೂಂ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತನೊಬ್ಬ ಮೇರಿ ಅವರ ಬ್ಯಾಗ್‌ ಕದ್ದೊಯ್ದಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮತದಾರರ ಗುರುಚಿನ ಚೀಟಿ, ಡ್ರೈವಿಂಗ್‌ ಲೈಸನ್ಸ್‌, ಎಚ್‌ಡಿಎಫ್‌ಸಿ, ಕಾರ್ಪೊರೇಶನ್‌, ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂ ಕಾರ್ಡ್‌ಗಳು, ಹೋಟೆಲ್‌ನ ಐ.ಡಿ ಕಾರ್ಡ್‌, ಮನೆ ಕೀಗಳು

ಹಾಗೂ ಮಾಂಗಲ್ಯ ಬ್ಯಾಗ್‌ನಲ್ಲಿ ಇತ್ತು ಎಂದು ಮೇರಿ ದೂರಿನಲ್ಲಿ ತಿಳಿಸಿದ್ದಾರೆ.

‘ಎರಡು ದಿನಗಳ ಬಳಿಕ ಅಂದರೆ, ಮೇ 18ರಂದು ಮೇರಿ ಅವರಿಗೆ ವ್ಯಕ್ತಿಯೊಬ್ಬ ಕರೆ ಮಾಡಿ ‘ನೀನು ಎಲ್ಲಿದ್ದಿಯಾ ಎಂದು ಕೇಳಿದ್ದಾನೆ’ ಆಗ ಮೇರಿ ‘ನಾನು ಹೋಟೆಲ್‌ನಲ್ಲಿ ಇದ್ದೇನೆ’ ಎಂದು ತಿಳಿಸಿದ್ದಾರೆ. ಹೀಗೆ ಹೇಳಿದ ಮರುಕ್ಷಣವೇ ಅಪರಿಚಿತ ವ್ಯಕ್ತಿ ‘ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದ್ದಾನೆ’ ತಕ್ಷಣವೇ ಮೇರಿ ಕರೆ ಸ್ಥಗಿತಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

‘ಅದೇ ಸಂಜೆ 6ರ ಸುಮಾರಿಗೆ ಮೇರಿ ಕೆಲಸ ಮಾಡುವ ಹೋಟೆಲ್‌ಗೆ ಅಪರಿಚಿತರು ಕರೆ ಮಾಡಿ ‘ನಿಮ್ಮ ಹೋಟೆಲ್‌ನಲ್ಲಿ ಕೆಲಸ ಮಾಡುವ ಮಹಿಳೆಯ ಬ್ಯಾಗ್‌ ಸಿಕ್ಕಿದೆ ತೆಗೆದು

ಕೊಂಡು ಹೋಗಲು ಹೇಳಿ’ ಎಂದು ಹೇಳಿದ್ದಾರೆ. ಹೋಟೆಲ್‌ ಸಿಬ್ಬಂದಿ ಈ ವಿಷಯನ್ನು ಮೇರಿಗೆ ತಿಳಿಸಿದ್ದಾರೆ’ ಎಂದು ಹೇಳಿದ್ದಾರೆ.

ಹೋಟೆಲ್‌ ಸಿಬ್ಬಂದಿಯಿಂದ ಮೊಬೈಲ್‌ ಸಂಖ್ಯೆ ಪಡೆದ ಮೇರಿ ಆ ಸಂಖ್ಯೆಗೆ ಕರೆ ಮಾಡಿದಾಗ ಇಂದಿರಾ ನಗರದ 18ನೇ ಮುಖ್ಯರಸ್ತೆಯ ಮೋರಿ ಪಕ್ಕದಲ್ಲಿರುವ ಪಾನಿಪುರಿ ಅಂಗಡಿಯ ಬಳಿ ಬರಲು ಹೇಳಿದ್ದಾರೆ. ಆಗ ಮೇರಿ ಮತ್ತು ಆಕೆಯ ಪತಿ ಅಲ್ಲಿಗೆ ಹೋದಾಗ ಅಪರಿಚಿತರು ಬ್ಯಾಗ್ ನೀಡಿ,10ನೇ ಮುಖ್ಯರಸ್ತೆಯಲ್ಲಿ ಕಸ ಗುಡಿಸುವವರ ಬಳಿ ಸಿಕ್ಕಿತು ಎಂದು ಹೇಳಿದ್ದಾರೆ.

‘ಬ್ಯಾಗ್‌ ನೋಡಿದಾಗ ಡ್ರೈವಿಂಗ್‌ ಲೈಸನ್ಸ್‌, ಎಚ್‌ಡಿಎಫ್‌ಸಿ, ಕಾರ್ಪೊರೇಶನ್‌, ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂ ಕಾರ್ಡ್‌ಗಳು, ಹೋಟೆಲ್‌ನ ಐ.ಡಿ ಕಾರ್ಡ್‌, ಮನೆ ಕೀಗಳಿತ್ತು. ಮತದಾರರ ಗುರುತಿನ ಚೀಟಿ ಮತ್ತು ಮಾಂಗಲ್ಯ ಸರ ಇರಲಿಲ್ಲ‘ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry