ಕಂಪನಿಯಲ್ಲೇ ಕಳ್ಳತನ ನಾಲ್ವರು ನೌಕರರ ಬಂಧನ

7
₹85 ಲಕ್ಷ ಮೌಲ್ಯದ ಉಪಕರಣ ಕಳವು

ಕಂಪನಿಯಲ್ಲೇ ಕಳ್ಳತನ ನಾಲ್ವರು ನೌಕರರ ಬಂಧನ

Published:
Updated:

ಬೆಂಗಳೂರು: ನಗರದ ‘ಸಿಸ್ಕೊ ಸಿಸ್ಟಂ ಇಂಡಿಯಾ’ ಸಾಫ್ಟ್‌ವೇರ್‌ ಕಂಪನಿಯ ₹85 ಲಕ್ಷ ಮೌಲ್ಯದ ಉಪಕರಣಗಳನ್ನು ಕದ್ದಿದ್ದ ಆರೋಪದಡಿ, ಅದೇ ಕಂಪನಿಯ ನಾಲ್ವರು ಕೆಲಸಗಾರರನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಪಣತ್ತೂರಿನ ಮಾನಸ ರಂಜನ್ ದಾಸ್ (24), ಜನಮೇಜಯ ಸುತಾರ್ (26), ಕೊಡಿಗೇಹಳ್ಳಿಯ ನಿರಂಕರಿ ಬಾಯಿ (23) ಹಾಗೂ ಚಂದ್ರಕಾಂತ್‌ ಬಂಧಿತರು. ಅವರಿಂದ 195 ಉಪಕರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಾಡು ಬೀಸನಹಳ್ಳಿ ಹೊರವರ್ತುಲ ರಸ್ತೆ ಬಳಿ ಇರುವ ಕಂಪನಿಯ ಲಾಕರ್‌ನಲ್ಲಿದ್ದ ಉಪಕರಣಗಳು ಕಳುವಾದ ಬಗ್ಗೆ ಭದ್ರತಾ ವಿಭಾಗದ ವ್ಯವಸ್ಥಾಪಕ ಅವತಾರ್ ಸಿಂಗ್‌ ದೂರು ನೀಡಿದ್ದರು.  ತನಿಖೆ ಕೈಗೊಂಡಾಗ, ಕೆಲಸಗಾರರೇ ಕೃತ್ಯ ಎಸಗಿದ್ದು ಎಂಬುದು ಗೊತ್ತಾಯಿತು ಎಂದು ಮಾರತ್ತಹಳ್ಳಿ ಪೊಲೀಸರು ಹೇಳಿದರು.

ಸರ್ವರ್‌ನಿಂದ ಸರ್ವರ್‌ಗೆ ಅಂತರ್ಜಾಲ ಸಂಪರ್ಕ ಕಲ್ಪಿಸುವುದಕ್ಕಾಗಿ ಅಮೆರಿಕದಿಂದ ಈ ಉಪಕರಣಗಳನ್ನು ತರಿಸಲಾಗಿತ್ತು. ಕಂಪನಿಯಲ್ಲಿ ಕಚೇರಿ ನಿರ್ವಹಣಾ ಕೆಲಸ ಮಾಡುತ್ತಿದ್ದ ಆರೋಪಿಗಳು, ಆ ಉಪಕರಣಗಳ ಬಗ್ಗೆ ತಿಳಿದುಕೊಂಡಿದ್ದರು. ಅವುಗಳನ್ನು ಕದ್ದು, ಗುಜರಿ ಅಂಗಡಿಗೆ ಮಾರಾಟ ಮಾಡಿದ್ದರು.

ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳನ್ನು ಆರೋಪಿಗಳು, ಕೇವಲ ₹500 ಹಾಗೂ ₹1,000ಕ್ಕೆ ಮಾರಾಟ ಮಾಡಿದ್ದರು. ಮೂವರು ಉಪ

ಕರಣಗಳನ್ನು ಕದ್ದು, ಚಂದ್ರಕಾಂತ್‌ಗೆ ಕೊಡುತ್ತಿದ್ದರು. ಆತನೇ ಅವುಗಳನ್ನು ಮಾರಾಟ ಮಾಡುತ್ತಿದ್ದ. ಬಂದ ಹಣದಲ್ಲಿ ನಾಲ್ವರು ಹಂಚಿಕೊಳ್ಳುತ್ತಿದ್ದರು. ಉಪಕರಣಗಳ ನಿಜವಾದ ಬೆಲೆ ಆರೋಪಿಗಳಿಗೆ ಗೊತ್ತಿರಲಿಲ್ಲ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry