10 ಸಾವಿರ ಎಂಬಿಬಿಎಸ್ ಸೀಟು ಕಡಿತ

7

10 ಸಾವಿರ ಎಂಬಿಬಿಎಸ್ ಸೀಟು ಕಡಿತ

Published:
Updated:
10 ಸಾವಿರ ಎಂಬಿಬಿಎಸ್ ಸೀಟು ಕಡಿತ

ನವದೆಹಲಿ: ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಶಿಫಾರಸಿನಂತೆ 2018–19ನೇ ಸಾಲಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳದಂತೆ 82 ವೈದ್ಯಕೀಯ ಕಾಲೇಜುಗಳಿಗೆ ಕೇಂದ್ರದ ಆರೋಗ್ಯ ಸಚಿವಾಲಯ ನಿರ್ಬಂಧ ವಿಧಿಸಿದೆ.

ವೈದ್ಯಕೀಯ ಮಂಡಳಿಯು ವಿವಿಧ ವೈದ್ಯಕೀಯ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಕೆಲವು ಕಾಲೇಜುಗಳಲ್ಲಿ ಲೋಪಗಳು ಕಂಡುಬಂದಿವೆ. ಮೂಲ

ಸೌಕರ್ಯ, ಸಿಬ್ಬಂದಿ ಹಾಗೂ ಸಂಪನ್ಮೂಲ ಕೊರತೆ ಮೊದಲಾದವುಗಳನ್ನು ಪರಿಗಣಿಸಿ ಎಂಸಿಐ ಈ ಶಿಫಾರಸು ಮಾಡಿತ್ತು.

70 ಖಾಸಗಿ ಹಾಗೂ 12 ಸರ್ಕಾರಿ ಕಾಲೇಜುಗಳ ಮೇಲೆ ನಿರ್ಬಂಧ ಹೇರಲಾಗಿದೆ. ಹೀಗಾಗಿ 10 ಸಾವಿರಕ್ಕೂ ಅಧಿಕ ಎಂಬಿಬಿಎಸ್ ಸೀಟುಗಳು ಕಡಿಮೆಯಾಗಲಿವೆ.

ಈ ಮಧ್ಯೆ, 31 ಸರ್ಕಾರಿ ಹಾಗೂ 37 ಖಾಸಗಿ ಕಾಲೇಜು ಪ್ರಾರಂಭಿಸಲು ಬಂದಿದ್ದ ಪ್ರಸ್ತಾವಗಳನ್ನು ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry