7
ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

‘ಪ್ರಕೃತಿ ಉಳಿಸಿ, ಬೆಳೆಸಲು ಸಲಹೆ

Published:
Updated:
‘ಪ್ರಕೃತಿ ಉಳಿಸಿ, ಬೆಳೆಸಲು ಸಲಹೆ

ಬಾಗಲಕೋಟೆ: ನಗರದ ಬಿ.ವಿ.ವಿ. ಸಂಘದ ಬಸವೇಶ್ವರ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಮತ್ತು ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಸ್.ಅಂಗಡಿ, ‘ಮನುಷ್ಯ ಪ್ರಕೃತಿಯ ಶಿಶು. ಅವನ ಎಲ್ಲ ಆಶೋತ್ತರಗಳನ್ನು ಈಡೇರಿಸಬಲ್ಲ ಶಕ್ತಿ ಪ್ರಕೃತಿಗಿದೆ. ಅದನ್ನು ಉಳಿಸಿ, -ಬೆಳೆಸುವ ಮನೋಭಾವ ಬೆಳೆಯಬೇಕಾಗಿದೆ’ ಎಂದು ಅಭಿಪ್ರಾಯ ಪಟ್ಟರು.

‘ಜಾಗತಿಕರಣದ ಭರಾಟೆಯಲ್ಲಿ ಅಭಿವೃದ್ಧಿಯ ನೆಪ ಮಾಡಿಕೊಂಡು ಪರಿಸರವನ್ನು ನಾಶ ಮಾಡಲಾಗುತ್ತಿದೆ. ಗಣಿಗಾರಿಕೆ, ಮರಳುದಂಧೆ, ಅರಣ್ಯಗಳ ಲೂಟಿ, ಪ್ರಾಣಿ ಸಂಕುಲಗಳ ಬೇಟೆ, ಮಿತಿಮೀರಿದ ಪ್ಲಾಸ್ಟಿಕ್ ಬಳಕೆ ಎಲ್ಲವೂ ಪ್ರಕೃತಿ ಮತ್ತು ಜೀವ ಸಂಕುಲಕ್ಕೆ ಮಾರಕವಾಗಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‌ ‘ಮನುಷ್ಯ ಮುಂದಾಗಬಹುದಾದ ದುರಂತದ ಎಚ್ಚರವನ್ನು ಅರಿತು ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಬೇಕು. ಮುಂದಿನ ಜನಾಂಗಕ್ಕೆ ಶುದ್ಧ ನೀರು, ಗಾಳಿ, ಸ್ವಚ್ಚ ಸಮುದ್ರ ಹಾಗೂ ನೀಲಿ ಆಕಾಶವನ್ನು ಬಿಟ್ಟು ಹೋಗಬೇಕಿದೆ’ ಎಂದರು.

ಪ್ರಾಚಾರ್ಯ ಡಾ.ಎಸ್.ಆರ್. ಕಂದಗಲ್ಲ ಅಧ್ಯಕ್ಷತೆ ವಹಿಸಿದ್ದರು. ಸಂಘದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಏರ್ಪಡಿಸಿದ್ದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ವಿದ್ಯಾರ್ಥಿಗಳ ಕಲ್ಯಾಣಧಿಕಾರಿ ಡಾ.ಎನ್.ಎಚ್. ಬೇವಿನಹಳ್ಳಿ, ವೃಕ್ಷ ಮಿತ್ರಮಂಡಳಿಯ ಕಾರ್ಯಾಧ್ಯಕ್ಷ ಡಾ.ಆರ್.ಗಿರೀಶ ಇದ್ದರು. ಪ್ರಾಚಾರ್ಯೆ ಸಿ.ಎಸ್.ಮೇಲಗಡೆ ಸ್ವಾಗತಿಸಿದರು, ವೈಷ್ಣವಿ ಕಟ್ಟಿ ಪ್ರಾರ್ಥಿಸಿದರು. ಡಾ.ಎನ್.ಎಚ್. ಬೇವಿನಹಳ್ಳಿ ವಂದಿಸಿದರು.

ಪರಿಸರ ಸಂರಕ್ಷಣೆಗೆ ಸಹಕಾರ ಅಗತ್ಯ

ಗುಳೇದಗುಡ್ಡ: ‘ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು’ ಎಂದು ಪುರಸಭೆ ಅಧ್ಯಕ್ಷ ಶಿವುಕುಮಾರ ಹಾದಿಮನಿ ಹೇಳಿದರು.

ಮಂಗಳವಾರ ಪುರಸಭೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಜಾಥಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಜಾಗೃತಿ ಜಾಥಾ ಮೆರವಣಿಗೆ ಪುರಸಬೆಯಿಂದ ಹೊರಟು ಸರಾಫ್ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ ಮಾರ್ಗದ ಮೂಲಕ ಹಾಯ್ದು ಪುರಸಭೆಗೆ ಬಂದು ತಲುಪಿತು. ಜಾಥಾ ಮೆರವಣಿಗೆಯಲ್ಲಿ ಪುರಸಭೆ ಸದಸ್ಯರು ಅಕ್ಕಮಹಾದೇವಿ ಹೆಗಡೆ, ಈಶ್ವರ ಕಂಠಿ, ಅಭಿನಾಬಿ ಮುಜಾಹಿದ್‌, ಮುಖ್ಯಾಧಿಕಾರಿ ಏಸು ಬೆಂಗಳೂರು, ಕಚೇರಿ ವ್ಯವಸ್ಥಾಪಕ ಯು.ಜಿ.ವರದಪ್ಪನವರ, ರಮೇಶ ಪದಕಿ, ಪಿ.ವೈ.ದುರಗದ, ಕುಮಾರ ತಟ್ಟಿಮಠ, ಶರಣಯ್ಯ ಸರಗಣಾಚಾರಿ ಸಸಿಗಳನ್ನು ನೆಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry