ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೆಂಟ್‌ಗಳ ಬೆಲೆ ಇಳಿಕೆ ಬಡ, ಮಧ್ಯಮ ವರ್ಗದ ಜನರಿಗೆ ಹೆಚ್ಚು ಸಹಾಯ: ಮೋದಿ

ಪ್ರಧಾನಿ ನರೇಂದ್ರ ಮೋದಿ
Last Updated 7 ಜೂನ್ 2018, 6:05 IST
ಅಕ್ಷರ ಗಾತ್ರ
ADVERTISEMENT

ನವದೆಹಲಿ:ಅನಾರೋಗ್ಯವು ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಅಪಾರ ಆರ್ಥಿಕ ಹೊರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಯೋಜನೆಯ ವಿವಿಧ ಫಲಾನುಭವಿಗಳ ಜತೆ ಗುರುವಾರ ಪ್ರಧಾನಿ ಸಂವಾದ ನಡೆಸಿದರು.

ಜನರಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಲು ಹಾಗೂ ಪ್ರತಿಯೊಬ್ಬ ಬಾರತೀಯರಿಗೆ ಉತ್ತಮ ಆರೋಗ್ಯದ ಕಾಳಜಿಯನ್ನು ಖಾತ್ರಿಪಡಿಸುವುದು ಸರ್ಕಾರದ ಉದ್ದೇಶ. ಇದಕ್ಕಾಗಿ ನಿರಂತರ ಪ್ರಯತ್ನ ನಡೆದಿದೆ ಎಂದು ಮೋದಿ ತಿಳಿಸಿದರು.

ಕೇಂದ್ರ ಸರ್ಕಾರ ಸ್ಟೆಂಟ್‌ಗಳ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಇದು ಬಡ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಸಹಾಯ ವಾಗಿದೆ ಎಂದು ಪ್ರಧಾನಿ ಹೇಳಿದರು.

ಪಡೆಲು ನೆರವಾಗುವಂತೆ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಿಂದಾಗಿ ಬಾರತದಾದ್ಯಂತ ಸಾಕಷ್ಟು ಜನ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಪ್ರಧಾನಿ ಜತೆ ಸಂವಾದ ನಡೆಸಿದ ಒಡಿಶಾದ ಸುಭಾಷ್‌ ಮೊಹಂತಿ, ನಾನು ರಕ್ತದೊತ್ತಡ, ಮಧುಮೇಹ ಮತ್ತು ಹೆಚ್ಚಿನ ಕೊಬ್ಬಿನಾಂಶ ಸಂಗ್ರಹ ಸಮಸ್ಯೆ ವಿರುದ್ಧ ಹೋರಾಡುತ್ತಿದ್ದೇನೆ. ಪ್ರಧಾನಮಂತ್ರಿ ಜನೌಷಧಿ ಯೋಜನೆ ಪರಿಣಾಮ ನಾನು ಕಡಿಮೆ ದರದಲ್ಲಿ ಔಷಧಿ ಖರೀದಿಸುವಂತಾಗಿದೆ. ಈ ಮೊದಲು ನಾನು ತಿಂಗಳೊಂದಕ್ಕೆ ₹3 ಸಾವಿರ ವೆಚ್ಚ ಮಾಡುತ್ತಿದ್ದೆ. ಇದೀಗ, ಅದರ ವೆಚ್ಚ ₹ 400ಕ್ಕೆ ಇಳಿದೆ ಎಂದು ಹೇಳಿದ್ದಾರೆ.

‘ಐದು ತಿಂಗಳ ಹಿಂದೆ ನಾನು ಅಧಿಕ ಕೊಬ್ಬು ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಎದುರಿಸಿದ್ದೇನೆ. ಚಿಕಿತ್ಸೆಗಾಗಿ ಪ್ರತಿ ಹತ್ತು ದಿನಗಳಲ್ಲಿ ನಾನು ₹1 ಸಾವಿರ ವೆಚ್ಚ ಮಾಡುತ್ತಿದ್ದೆ. ಆದರೆ, ಜನೌಷಧಿ ಯೋಜನೆಯಿಂದಾಗಿ ಆ ವೆಚ್ಚ ₹200ಕ್ಕೆ ತಗ್ಗಿದೆ ಎಂದು ಹೈದರಾಬಾದ್‌ನಿಂದ ಮಾತನಾಡಿದ ಮಾಲಾ ಎಂಬುವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT