ಮೋದಿ ಸರ್ಕಾರ ಜಮ್ಮು–ಕಾಶ್ಮೀರದ ಹಣೆಬರಹ ಬದಲಿಸಲಿದೆ: ರಾಜನಾಥ್‌ ಸಿಂಗ್‌

7

ಮೋದಿ ಸರ್ಕಾರ ಜಮ್ಮು–ಕಾಶ್ಮೀರದ ಹಣೆಬರಹ ಬದಲಿಸಲಿದೆ: ರಾಜನಾಥ್‌ ಸಿಂಗ್‌

Published:
Updated:
ಮೋದಿ ಸರ್ಕಾರ ಜಮ್ಮು–ಕಾಶ್ಮೀರದ ಹಣೆಬರಹ ಬದಲಿಸಲಿದೆ: ರಾಜನಾಥ್‌ ಸಿಂಗ್‌

ಶ್ರೀನಗರ: ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಹಣೆಬರಹ ಬದಲಿಸಲಿದೆ, ಆದರೆ ಯುವಕರೂ ಸಹ ತಮ್ಮ ಹಣೆಬರಹವನ್ನು ತಾವೇ ಬದಲಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

ಗುರುವಾರ ಶ್ರೀನಗರದಲ್ಲಿ ನಡೆದ ಕ್ರೀಡಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸರ್ಕಾರಕ್ಕೆ ಕಾಶ್ಮೀರದ ಮೇಲೆ ಸಾಕಷ್ಟು ಕಾಳಜಿಯಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸುತ್ತಿರುವ ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಯುವಕರಿಗೆ ಕರೆ ನೀಡಿದರು.

‘ಹಲವು ವರ್ಷಗಳಿಂದ ಕಗ್ಗತ್ತಲಲ್ಲಿ ಕಳೆದು ಹೋಗಿರುವ ಕ್ರೀಡಾ ಪ್ರತಿಭೆಗಳು ಹಾಗೂ ಯುವಕರಿಗೆ ಇದೀಗ ಅವಕಾಶ ನೀಡುತ್ತಿದ್ದೇವೆ. ಕ್ರೀಡಾ ಮಾಂತ್ರಿಕತೆ ಹಾಗೂ ಅಭ್ಯಾಸದ ಬಲದಿಂದ ಜಮ್ಮು–ಕಾಶ್ಮೀರದ ಯುವಕರು ಭವಿಷ್ಯ ಬದಲಿಸಿಕೊಳ್ಳಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಮ್ಮು, ಕಾಶ್ಮೀರ ಹಾಗೂ ಲಡಾಕ್‌ನ 3000 ಕ್ರೀಡಾಪಟುಗಳು ಮತ್ತು ವಿದ್ಯಾರ್ಥಿಗಳು ಕ್ರೀಡಾ ಸಮಾವೇಶದಲ್ಲಿ ಭಾಗಿಯಾದರು.

ಪವಿತ್ರ ರಂಜಾನ್‌ ಮಾಸ ಜೂನ್‌ 15ರಂದು ಕೊನೆಯಾಗಲಿದ್ದು, ಆನಂತರವೂ ಕಾಶ್ಮೀರ ಗಡಿಯಲ್ಲಿ ಕದನ ವಿರಾಮ ಮುಂದುವರಿಸುವ ಸಂಬಂಧ ರಾಜನಾಥ್‌ ಸಿಂಗ್‌ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.

ರಂಜಾನ್‌ ಕದನ ವಿರಾಮದ ನಡುವೆಯೂ ಉಗ್ರರರು ದಾಳಿ ಮುಂದುವರಿಸಿದ್ದರು. ಎರಡು ದಿನಗಳ ಕಾಶ್ಮೀರ ಪ್ರವಾಸದಲ್ಲಿರುವ ರಾಜನಾಥ್‌ ಸಿಂಗ್‌ ಭದ್ರತಾ ಪರಿಸ್ಥಿತಿ ಪರಿಶೀಲಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry