ಕಿಡ್ಸ್‌ ಫೆಸ್ಟ್‌ನಲ್ಲಿ ಮಕ್ಕಳ ಪ್ರತಿಭೆ ಅನಾವರಣ

7

ಕಿಡ್ಸ್‌ ಫೆಸ್ಟ್‌ನಲ್ಲಿ ಮಕ್ಕಳ ಪ್ರತಿಭೆ ಅನಾವರಣ

Published:
Updated:
ಕಿಡ್ಸ್‌ ಫೆಸ್ಟ್‌ನಲ್ಲಿ ಮಕ್ಕಳ ಪ್ರತಿಭೆ ಅನಾವರಣ

ಮ್ಯಾಕ್ಸ್‌ ಫ್ಯಾಷನ್ ಕಂಪನಿಯು ನಗರದ ಫೀನಿಕ್ಸ್ ಮಾರ್ಕೆಟ್‌ ಸಿಟಿ ಮಾಲ್‌ನಲ್ಲಿ ಈಚೆಗೆ ‘ಮ್ಯಾಕ್ಸ್‌ ಕಿಡ್ಸ್‌ ಫೆಸ್ಟ್‌ 2018’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಆರು ವರ್ಷಗಳಿಂದ ಮ್ಯಾಕ್ಸ್ ಫ್ಯಾಷನ್‌ ಸಂಸ್ಥೆಯು ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು, ಮಕ್ಕಳಲ್ಲಿನ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಡುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುಟಾಣಿಗಳು ಬಣ್ಣ ಬಣ್ಣದುಡುಗೆಯ ತೊಟ್ಟು ವೇದಿಕೆ ಮೇಲೆ ಗಾಯನ ಹಾಗೂ ನೃತ್ಯ ಪ್ರದರ್ಶನ ನೀಡಿ ನೆರೆದಿದ್ದವರನ್ನು ರಂಜಿಸಿದರು. ಕೆಲವರು ವೇದಿಕೆ ಮೇಲೆಯೇ ಚಿತ್ರಗಳನ್ನು ರಚಿಸಿದರು.

ಸಂಗೀತ, ನೃತ್ಯ ಹಾಗೂ ಚಿತ್ರಕಲಾ ವಿಭಾಗದಲ್ಲಿ ಕ್ರಮವಾಗಿ ಡೆರೆಕ್ ಮೊಯಿರಂಗತೆಮ್, ರಿಯಾಸಿಂಗ್ ಮತ್ತು ಅವನಿ ಅರುಣ್ ಪ್ರಥಮ ಸ್ಥಾನ ಪಡೆದು ಬಹುಮಾನ ಗಿಟ್ಟಿಸಿಕೊಂಡರು. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ನಟಿ ಕಾವ್ಯ ಗೌಡ ಅವರು ತೀರ್ಪುಗಾರರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇಮ್ರಾನ್ ಮಾತನಾಡಿ, ‘ಈ ಸ್ಪರ್ಧೆಯಲ್ಲಿ ಸಿಕ್ಕ ರೋಮಾಂಚನ ಅನುಭವವು ಈ ಹಿಂದೆ ನಾನು ಭಾಗಿಯಾಗಿದ್ದ ಯಾವುದೇ ಕಾರ್ಯಕ್ರಮಗಳಲ್ಲಿ ಸಿಕ್ಕಿರಲಿಲ್ಲ. ವೇದಿಕೆ ಮೇಲೆ ಪ್ರದರ್ಶನ ನೀಡಿದ ಒಬ್ಬೊಬ್ಬರಲ್ಲೂ ಒಂದೊಂದು ಪ್ರತಿಭೆಯಿದೆ. ಇಂಥ ವೇದಿಕೆಗಳನ್ನು ಮಗದಷ್ಟು ಸೃಷ್ಟಿಸುವ ಮೂಲಕ ಈ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry