ಸಾಲಮನ್ನಾ ವಿಚಾರದಲ್ಲಿ ಎಚ್‌ಡಿಕೆ ರೈತರ ಕಿವಿಗೆ ಹೂವು ಇಡುತ್ತಿದ್ದಾರೆ: ಬಿ. ಶ್ರೀರಾಮುಲು

7

ಸಾಲಮನ್ನಾ ವಿಚಾರದಲ್ಲಿ ಎಚ್‌ಡಿಕೆ ರೈತರ ಕಿವಿಗೆ ಹೂವು ಇಡುತ್ತಿದ್ದಾರೆ: ಬಿ. ಶ್ರೀರಾಮುಲು

Published:
Updated:
ಸಾಲಮನ್ನಾ ವಿಚಾರದಲ್ಲಿ ಎಚ್‌ಡಿಕೆ ರೈತರ ಕಿವಿಗೆ ಹೂವು ಇಡುತ್ತಿದ್ದಾರೆ: ಬಿ. ಶ್ರೀರಾಮುಲು

ಚಿತ್ರದುರ್ಗ: ರಾಜ್ಯದ ರೈತರ ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರೈತರ ಕಿವಿಗೆ ಹೂವು ಇಡುತ್ತಿದ್ದಾರೆ ಎಂದು ಮೊಳಕಾಲ್ಮುರು ಶಾಸಕ ಬಿ. ಶ್ರೀರಾಮುಲು ಹೇಳಿದರು.

ಇಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಆಡಳಿತ ಪಕ್ಷ ಏನೇ ತೊಂದರೆ ಕೊಟ್ಟರೂ ಹೋರಾಟಕ್ಕೆ ವಿರೋಧ ಪಕ್ಷ ಸಿದ್ಧವಿದೆ. ಸಾಲ ಮನ್ನಾ ನಮ್ಮ ಮೊದಲ ಆದ್ಯತೆ. ಇಲ್ಲವಾದಲ್ಲಿ ರಾಜ್ಯದಾದ್ಯಂತ ಹೋರಾಡುತ್ತೇವೆ’ ಎಂದರು.

‘ಸಚಿವ ಸಂಪುಟ ರಚನೆಯ ಗೊಂದಲವನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಧಿಕಾರದ ಆಸೆಗಾಗಿ ರಚಿತವಾಗಿರುವ ಸಮ್ಮಿಶ್ರ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ಅವರ ನಡುವೆ ಒಳಜಗಳ, ಕಚ್ಚಾಟ ನಡೆಯುತ್ತಿದೆ. ಈಗ ಮತ್ತೊಮ್ಮೆ ಚುನಾವಣೆ ನಡೆದರೂ ನಾವು 150 ಸ್ಥಾನ ಗೆಲ್ಲುತ್ತೇವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry