ಶನಿವಾರ, 8–6–1968

7

ಶನಿವಾರ, 8–6–1968

Published:
Updated:

ಅಸ್ಸಾಂ ಪುನರ‍್ರಚನೆ ಬಗ್ಗೆ ರಾಜಿ ಯತ್ನ

ನವದೆಹಲಿ, ಜೂನ್ 6– ಅಸ್ಸಾಂ ಪುನರ‍್ರಚನೆಗೆ ಗೃಹಸಚಿವ ಶಾಖೆ ಹೊಸದಾಗಿ ಪರಿಷ್ಕೃತ ಸಲಹೆಗಳನ್ನು ಮಂಡಿಸುವ ಸಂಭವವಿದೆ.

ಪ್ರಸ್ತುತ ಯೋಜನೆ ಎಬ್ಬಿಸಿದ ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ ಈ ಸಲಹೆಗಳನ್ನು ರೂಪಿಸಲಾಗುವುದು.

ಎಸ್ಸೆಸ್ಸೆಲ್ಸಿಯಲ್ಲಿ ಶೇ. 33.7 ರಷ್ಟು ಪೂರಾ ತೇರ್ಗಡೆ

ಬೆಂಗಳೂರು, ಜೂನ್ 7– ಕಳೆದ ಮಾರ್ಚಿ–ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದ್ದು, ಪರೀಕ್ಷೆಯ ಎಲ್ಲ ನಾಲ್ಕೂ ಭಾಗಗಳಲ್ಲಿ ಕುಳಿತ 1,16,245 ಅಭ್ಯರ್ಥಿಗಳ ಪೈಕಿ 39250 ಅಭ್ಯರ್ಥಿಗಳು ಉತ್ತೀರ್ಣರಾಗಿ, ಫಲಿತಾಂಶ ಶೇಕಡಾ 33.7 ರಷ್ಟು ಆಗಿದೆ.

ಸಕಲ ಗೌರವ ಸಹಿತ ವೈಕುಂಠ ಬಾಳಿಗಾ ಅಂತ್ಯಕ್ರಿಯೆ

ಬೆಂಗಳೂರು, ಜೂನ್ 7– ನಿನ್ನೆ ಸಂಜೆ ಮದರಾಸಿನಲ್ಲಿ ನಿಧನರಾದ ವಿಧಾನ ಸಭಾಧ್ಯಕ್ಷ ಶ್ರೀ ವೈಕುಂಠ ಬಾಳಿಗಾ ಅವರ ಕಳೇಬರದ ಅಂತ್ಯಕ್ರಿಯೆ ಇಂದು ಸಂಜೆ ಇಲ್ಲಿ ನಡೆಯಿತು.

ಹರಿಶ್ಚಂದ್ರ ಘಾಟ್‌ನಲ್ಲಿ ದಿವಂಗತ ಬಾಳಿಗಾರ ಹಿರಿಯ ಮಗ ಶ್ರೀ ವಿಶ್ವನಾಥ ಬಾಳಿಗಾ ಚಿತೆಗೆ ಬೆಂಕಿ ಹೊತ್ತಿಸುವ ಮುನ್ನ ಪೋಲೀಸ್ ಗೌರವಗಳನ್ನು ಅರ್ಪಿಸಲಾಯಿತು.

ನ್ಯೂಯಾರ್ಕಿನಲ್ಲಿ ಕೆನೆಡಿ ಕಳೇಬರ: ಜನರಿಂದ ಗೌರವ ವೀಕ್ಷಣೆ

ನ್ಯೂಯಾರ್ಕ್, ಜೂನ್ 7– ಶೋಕತಪ್ತ ನ್ಯೂಯಾರ್ಕ್ ಜನರು ಇಂದು ಇಲ್ಲಿನ ಸೇಂಟ್ ಪ್ಯಾಟ್ರಿಕ್ ರೋಮನ್ ಕಾಥೊಲಿಕ್ ಕಥೆಡ್ರಲ್‌ನಲ್ಲಿ ರಾಬರ್ಟ್ ಕೆನೆಡಿಯವರಿಗೆ ಅಂತಿಮ ಗೌರವವನ್ನು ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry