ಕೂಡಗಿ: ಎನ್‌ಟಿಪಿಸಿ ಮೊದಲ ಘಟಕ ಸ್ಥಗಿತ

7

ಕೂಡಗಿ: ಎನ್‌ಟಿಪಿಸಿ ಮೊದಲ ಘಟಕ ಸ್ಥಗಿತ

Published:
Updated:

ನಿಡಗುಂದಿ (ವಿಜಯಪುರ): ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ತಗ್ಗಿದ್ದರಿಂದ, ಕೂಡಗಿ ಬಳಿಯ ಎನ್‌ಟಿಪಿಸಿಯ ಶಾಖೋತ್ಪನ್ನ ಸ್ಥಾವರದ 800 ಮೆಗಾವಾಟ್ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಮೊದಲ ಘಟಕ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

ಎರಡನೇ ಘಟಕ 460 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುತ್ತಿದ್ದು, ರಾಜ್ಯವೂ ಸೇರಿದಂತೆ ಪಾಲುದಾರ ಐದು ರಾಜ್ಯಗಳ ಬೇಡಿಕೆಗೆ ತಕ್ಕಂತೆ ಕೇಂದ್ರ ವಿದ್ಯುತ್‌ ಗ್ರಿಡ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ’ ಎಂದು ಎನ್‌ಟಿಪಿಸಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರ್ನಾಟಕದಿಂದ ವಿದ್ಯುತ್‌ ಬೇಡಿಕೆ ಬಾರದಿದ್ದುದರಿಂದ ಅನಿವಾರ್ಯವಾಗಿ ಮೊದಲ ಘಟಕ ಸ್ಥಗಿತಗೊಳಿಸಿದ್ದೇವೆ. ಬೇಡಿಕೆ ಬಂದ ನಂತರ ಪುನಃ ಆರಂಭಿಸುತ್ತೇವೆ. ಕಲ್ಲಿದ್ದಲು, ನೀರಿನ ಕೊರತೆಯಿಲ್ಲ’ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry