ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್‌ಗಳು

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು (ರೆಪೊ) ಹೆಚ್ಚಿಸಿದ ಬೆನ್ನಲ್ಲೇ ಕೆಲ ಬ್ಯಾಂಕ್‌ಗಳು ವಿವಿಧ ಸಾಲಗಳ ಮೇಲಿನ ಬಡ್ಡಿ ದರ ಏರಿಸಿವೆ.

ಇದರಿಂದಾಗಿ ಗೃಹ, ವಾಹನ ಮತ್ತು ಉದ್ದಿಮೆ ಸಾಲಗಳ ತಿಂಗಳ ಸಮಾನ ಕಂತುಗಳ (ಇಎಂಐ) ಮೊತ್ತ ಹೆಚ್ಚಳಗೊಳ್ಳಲಿದೆ.

ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌, ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಬಡ್ಡಿ ದರವನ್ನು ಆರ್‌ಬಿಐನ ನಿರ್ಧಾರಕ್ಕೂ ಮುನ್ನವೇ ಹೆಚ್ಚಿಸಿವೆ. ಈ ದೊಡ್ಡ ಬ್ಯಾಂಕ್‌ಗಳ ಸಾಲಿಗೆ ಈಗ ಇಂಡಿಯನ್‌ ಬ್ಯಾಂಕ್‌, ಕರೂರ್‌ ವೈಶ್ಯ ಬ್ಯಾಂಕ್‌ ಸೇರಿವೆ.

ವಿವಿಧ ಅವಧಿಯ ಸಾಲಗಳಿಗೆ ಸಂಬಂಧಿಸಿದಂತೆ ‘ಎಂಸಿಎಲ್‌ಆರ್‌’ ಅನ್ನು ಶೇ 0.10ರಷ್ಟು ಹೆಚ್ಚಿಸಲಾಗಿದೆ. ಬಡ್ಡಿ ದರ ಹೆಚ್ಚಿಸುವುದಾಗಿ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಇಂಗಿತ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT