ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಎಫ್‌ಡಿಐ ಒಳಹರಿವು ಪ್ರಮಾಣ

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

2016ರಲ್ಲಿ ₹ 2.94 ಲಕ್ಷ ಕೋಟಿ ಮೌಲ್ಯದ ಎಫ್‌ಡಿಐ ಹೂಡಿಕೆಯಾಗಿತ್ತು. ಇದು 2017ರಲ್ಲಿ ₹ 2.68 ಲಕ್ಷ ಕೋಟಿಗೆ ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆಯು ಬಿಡುಗಡೆ ಮಾಡಿರುವ 2018ರ ವಿಶ್ವ ಹೂಡಿಕೆ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

‘ಎಫ್‌ಡಿಐ ಇಳಿಕೆ ಮತ್ತು ಜಾಗತಿಕ ಮೊತ್ತದಲ್ಲಿನ ಇಳಿಕೆಯು ನೀತಿ ರೂಪಿಸುವವರಿಗೆ ಅದರಲ್ಲೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ’  ಎಂದು ಯುಎನ್‌ಸಿಟಿಎಡಿಯ ಪ್ರಧಾನ ಕಾರ್ಯದರ್ಶಿ ಮುಖಿಸಾ ಕಿಟುಯಿ ಹೇಳಿ
ದ್ದಾರೆ. ‘ಅಮೆರಿಕದ ತೆರಿಗೆ ಸುಧಾರಣೆ ನೀತಿಯಿಂದಾಗಿ ಭವಿಷ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಹೂಡಿಕೆ ತಗ್ಗುವ ಸಾಧ್ಯತೆ ಇದೆ. ಆಧುನಿಕ ಕೈಗಾರಿಕಾ ನೀತಿಗಳು ವೈವಿಧ್ಯ ಮತ್ತು ಸಂಕೀರ್ಣವಾಗಿರುವುದರಿಂದ ಗಡಿಯಾಚೆಗಿನ ಹೂಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT