ಸುಲಿಗೆ ಪ್ರಕರಣ: ಅಬು ಸಲೇಂಗೆ 7 ವರ್ಷ ಜೈಲು

7

ಸುಲಿಗೆ ಪ್ರಕರಣ: ಅಬು ಸಲೇಂಗೆ 7 ವರ್ಷ ಜೈಲು

Published:
Updated:
ಸುಲಿಗೆ ಪ್ರಕರಣ: ಅಬು ಸಲೇಂಗೆ 7 ವರ್ಷ ಜೈಲು

ನವದೆಹಲಿ: ದೆಹಲಿಯ ಉದ್ಯಮಿಯೊಬ್ಬರಿಗೆ ₹5 ಕೋಟಿ ನೀಡುವಂತೆ ಬೇಡಿಕೆಯಿಟ್ಟಿದ್ದ ಪ್ರಕರಣದಲ್ಲಿ ಸುಲಿಗೆಕೋರ ಅಬು ಸಲೇಂಗೆ ದೆಹಲಿ ಕೋರ್ಟ್ 7 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿದೆ.

ಎರಡೂ ಕಡೆಯ ವಕೀಲರ ವಾದ–ಪ್ರತಿವಾದ ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ತರುಣ್ ಸೆಹ್ರಾವತ್ ಅವರು ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಸಲೇಂ ದೋಷಿ ಎಂದು ಮೇ 26ರಂದೇ ಘೋಷಿಸಲಾಗಿತ್ತು.

ಇತರ ಆರೋಪಿಗಳಾದ ಚಂಚಲ್ ಮೆಹ್ತಾ, ಮಜೀದ್ ಖಾನ್, ಪವನ್ ಕುಮಾರ್ ಮಿತ್ತಲ್ ಮತ್ತು ಮೊಹಮ್ಮದ್ ಅಶ್ರಫ್ ಅವರನ್ನು ಕೋರ್ಟ್ ಖುಲಾಸೆಗೊಳಿಸಿತು. ಆರೋಪಿ ಸಜ್ಜನ್ ಕುಮಾರ್ ಸೋನಿ ಎಂಬಾತ ಮೃತಪಟ್ಟಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry