ಬೆಲ್ಜಿಯಂ, ಜೆಕ್‌ ಗಣರಾಜ್ಯಕ್ಕೆ ಗೆಲುವು

5

ಬೆಲ್ಜಿಯಂ, ಜೆಕ್‌ ಗಣರಾಜ್ಯಕ್ಕೆ ಗೆಲುವು

Published:
Updated:
ಬೆಲ್ಜಿಯಂ, ಜೆಕ್‌ ಗಣರಾಜ್ಯಕ್ಕೆ ಗೆಲುವು

ಕೇಪ್‌ಟೌನ್‌: ಬೆಲ್ಜಿಯಂ ಮತ್ತು ಜೆಕ್ ಗಣರಾಜ್ಯ ತಂಡಗಳು ಫಿಫಾ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಯ ಅಭ್ಯಾಸ ಪಂದ್ಯಗಳಲ್ಲಿ ಬುಧವಾರ ರಾತ್ರಿ ಗೆಲುವು ಸಾಧಿಸಿವೆ.

ಬೆಲ್ಜಿಯಂ ತಂಡ ಈಜಿಪ್ಟ್ ಎದುರು 3–0 ಗೋಲುಗಳಿಂದ ಗೆದ್ದಿದ್ದು ಜೆಕ್ ಗಣರಾಜ್ಯ, ನೈಜೀರಿಯಾವನ್ನು 1–0ಯಿಂದ ಮಣಿಸಿತು. ಈಜಿಪ್ಟ್ ವಿರುದ್ಧದ ಪಂದ್ಯದ ಮೊದಲಾರ್ಧದಲ್ಲೇ ಬೆಲ್ಜಿಯಂ 2–0 ಗೋಲುಗಳ ಮುನ್ನಡೆ ಸಾಧಿಸಿತು. ಈಡನ್ ಹಜಾರ್ಡ್ ಈ ಮುನ್ನಡೆಯನ್ನು ಗಳಿಸಿಕೊಟ್ಟರು. 90ನೇ ನಿಮಿಷದಲ್ಲಿ ಮರಾನೆ ಫೆಲಾನಿ ತಂಡಕ್ಕೆ ಮೂರನೇ ಗೋಲು ಗಳಿಸಿಕೊಟ್ಟರು.

ಗಾಯಗೊಂಡ ಫಾರ್ವರ್ಡ್ ಆಟಗಾರ ಮೊಹಮ್ಮದ್‌ ಸಲಾ ಅವರ ಅನುಪಸ್ಥಿತಿಯಲ್ಲಿ ಈಜಿಪ್ಟ್ ಕಣಕ್ಕೆ ಇಳಿದಿತ್ತು. ವಿಶ್ವಕಪ್ ಆರಂಭವಾಗುವ ಮುನ್ನ ಅವರು ಚೇತರಿಸಿಕೊಳ್ಳಲಿದ್ದಾರೆ ಎಂದು ಕೋಚ್‌ ಹೆಕ್ಟರ್ ಕೂಪರ್‌ ಹೇಳಿದರು. ಈಜಿಪ್ಟ್ ಜೂನ್‌ 15ರಂದು ಮೊದಲ ಪಂದ್ಯದಲ್ಲಿ ಉರುಗ್ವೆ ವಿರುದ್ಧ ಸೆಣಸಲಿದೆ.

ಗೋಲು ಗಳಿಸಿದ ಥಾಮಸ್‌: ಥಾಮಸ್ ಕಲಾಸ್ 25ನೇ ನಿಮಿಷದಲ್ಲಿ ಗಳಿಸಿದ ಗೋಲಿನ ಮೂಲಕ ಜೆಕ್ ಗಣರಾಜ್ಯ ತಂಡ ನೈಜೀರಿಯಾವನ್ನು ಮಣಿಸಿತು. ನಾಲ್ಕು ಅಭ್ಯಾಸ ಪಂದ್ಯಗಳಲ್ಲಿ ಮೂರನ್ನು ಸೋತಿರುವ ನೈಜೀರಿಯಾ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry