ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಸೆಮಿಗೆ ರಫೆಲ್‌ ನಡಾಲ್‌

5

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಸೆಮಿಗೆ ರಫೆಲ್‌ ನಡಾಲ್‌

Published:
Updated:
ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಸೆಮಿಗೆ ರಫೆಲ್‌ ನಡಾಲ್‌

ಪ್ಯಾರಿಸ್‌ (ರಾಯಿಟರ್ಸ್‌): ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ 11ನೇ ಪ್ರಶಸ್ತಿ ಗೆಲ್ಲುವತ್ತ ಚಿತ್ತ ನೆಟ್ಟಿರುವ ರಫೆಲ್‌ ನಡಾಲ್‌ ಈ ಹಾದಿಯಲ್ಲಿ ಇನ್ನೆರಡು ಹೆಜ್ಜೆ ಸಾಗಬೇಕಿದೆ.

ಸ್ಪೇನ್‌ನ ಆಟಗಾರ ನಡಾಲ್‌, ಪುರು ಷರ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಫಿಲಿಪ್‌ ಚಾಟ್ರಿಯರ್‌ ಅಂಗಳದಲ್ಲಿ ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ನಡಾಲ್‌ 4–6, 6–3, 6–2, 6–2ರಲ್ಲಿ ಅರ್ಜೆಂಟೀನಾದ ಡಿಯಾಗೊ ಸ್ವಾರ್ಟ್ಜ್‌ಮನ್‌ ಅವರನ್ನು ಸೋಲಿಸಿದರು.

ಈ ಮೂಲಕ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ 11ನೇ ಬಾರಿ ಸೆಮಿ ಫೈನಲ್‌ ಪ್ರವೇಶಿಸಿದ ಶ್ರೇಯ ತಮ್ಮದಾಗಿ ಸಿಕೊಂಡರು. ಜೊತೆಗೆ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರಲ್ಲಿ 11 ಬಾರಿ ನಾಲ್ಕರ ಘಟ್ಟ ತಲುಪಿದ ಮೂರನೇ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ಜಿಮ್ಮಿ ಕಾನರ್ಸ್‌ (ಅಮೆರಿಕ ಓಪನ್‌) ಮತ್ತು ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ (ವಿಂಬಲ್ಡನ್‌ ಮತ್ತು ಆಸ್ಟ್ರೇಲಿಯಾ ಓ‍ಪನ್‌) ಮೊದಲು ಈ ಸಾಧನೆ ಮಾಡಿದ್ದರು.

ಸ್ಪೇನ್‌ನ ಆಟಗಾರ ನಡಾಲ್‌, ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾದ ಯುವಾನ್‌ ಮಾರ್ಟಿನ್ ಡೆಲ್‌ ಪೊಟ್ರೊ ವಿರುದ್ಧ ಸೆಣಸಲಿದ್ದಾರೆ.

ಸುಜಾನ್ ಲೆಂಗ್ಲೆನ್‌ ಅಂಗಳದಲ್ಲಿ ನಡೆದ ನಾಲ್ಕರ ಘಟ್ಟದ ಇನ್ನೊಂದು ಹೋರಾಟದಲ್ಲಿ ಡೆಲ್‌ ಪೊಟ್ರೊ 7–6, 5–7, 6–3, 7–5ರಲ್ಲಿ ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ಅವರನ್ನು ಪರಾಭವಗೊಳಿಸಿದರು.

ಇದರೊಂದಿಗೆ ಒಂಬತ್ತು ವರ್ಷಗಳ ನಂತರ ಫ್ರೆಂಚ್‌ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು. ಉಭಯ ಆಟಗಾರರು ಆರಂಭಿಕ ಸೆಟ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು.

**

ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ 11ನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ ನಡಾಲ್‌

ಒಂಬತ್ತು ವರ್ಷಗಳ ನಂತರ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟ ಡೆಲ್‌

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಮರಿನ್‌ ಸಿಲಿಕ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry