ಆಶಿಶ್‌ ಜಾಖರ್‌ಗೆ ಚಿನ್ನ

7
ಏಷ್ಯನ್‌ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್

ಆಶಿಶ್‌ ಜಾಖರ್‌ಗೆ ಚಿನ್ನ

Published:
Updated:

ಗಿಫು, ಜಪಾನ್‌: ಅಮೋಘ ಸಾಮರ್ಥ್ಯ ತೋರಿದ ಆಶಿಶ್‌ ಜಾಖರ್‌, ಏಷ್ಯನ್‌ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿ ಯನ್‌ಷಿಪ್‌ನ ಹ್ಯಾಮರ್‌ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಗಿಫು ನಾಗರಾಗವಾ ಕ್ರೀಡಾಂಗಣ ದಲ್ಲಿ ಗುರುವಾರ ನಡೆದ ಪುರುಷರ ಹ್ಯಾಮರ್‌ ಥ್ರೋ ಸ್ಪರ್ಧೆಯಲ್ಲಿ ಜಾಖರ್‌ 76.86 ಮೀಟರ್ಸ್‌ ದೂರ ಹ್ಯಾಮರ್‌ ಎಸೆದರು. ಇದರೊಂದಿಗೆ ತಮ್ಮ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮ ಪಡಿಸಿಕೊಂಡರು.

ಈ ವರ್ಷದ ಏಪ್ರಿಲ್‌ನಲ್ಲಿ ನಡೆದಿದ್ದ ಜೂನಿಯರ್‌ ಫೆಡರೇಷನ್‌ ಕಪ್‌ನಲ್ಲಿ 75.04 ಮೀಟರ್ಸ್‌ ಸಾಮರ್ಥ್ಯ ತೋರಿದ್ದ ಆಶಿಶ್‌ ಜಾಖರ್‌ ದಾಖಲೆ ನಿರ್ಮಿಸಿದ್ದರು.

ಫೈನಲ್ ಹಂತದ ಮೊದಲ ಅವಕಾ ಶದಲ್ಲಿ 74.97 ಮೀಟರ್ಸ್‌ ದೂರ ಹ್ಯಾಮರ್‌ ಎಸೆದ ಜಾಖರ್‌, ಎರಡು ಮತ್ತು ಮೂರನೇ ಅವಕಾಶಗಳಲ್ಲಿ ಕ್ರಮವಾಗಿ 76.86 ಮೀ. ಮತ್ತು 74.08 ಮೀ. ಸಾಮರ್ಥ್ಯ ತೋರಿ ಗಮನ ಸೆಳೆದರು.

ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ದಮನೀತ್‌ ಸಿಂಗ್‌ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡರು.

ಅವರು 74.08 ಮೀಟರ್ಸ್‌ ದೂರ ಹ್ಯಾಮರ್‌ ಎಸೆದರು. ಇದು ದಮನೀತ್‌ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಮಹಿಳೆಯರ ಟ್ರಿಪಲ್‌ ಜಂಪ್‌ನಲ್ಲಿ ಪ್ರಿಯದರ್ಶಿನಿ ಸುರೇಶ್‌ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಅವರು 13.08 ಮೀಟರ್ಸ್‌ ದೂರ ಜಿಗಿದರು. ಇದು ಪ್ರಿಯದರ್ಶಿನಿ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ವಿಯೆಟ್ನಾಮ್‌ನ ವು ಥಿ ನಗೊಕ್‌ ಹಾ (13.22 ಮೀ.) ಚಿನ್ನ ಗೆದ್ದರು. ಈ ವಿಭಾಗದ ಕಂಚು ಚೀನಾದ ಯುಯೊಕಿ ಪಾನ್‌ (13.21 ಮೀ.) ಅವರ ಪಾಲಾಯಿತು.

ಮಹಿಳೆಯರ ಐದು ಸಾವಿರ ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಪೂನಮ್‌ ಸೋನುನ್‌ ಕಂಚಿನ ಪದಕ ಜಯಿಸಿದರು. ಫೈನಲ್‌ನಲ್ಲಿ ಪೂನಮ್‌ 17 ನಿಮಿಷ 03.75 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಜಪಾನ್‌ನ ಮಿಕುನಿ ಯಡಾ (16ನಿ,31.65ಸೆ.) ಮತ್ತು ಚೀನಾದ ಲಿಹುವಾ ನಿಯು (16ನಿ,55.54ಸೆ.) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದರು.

ಮಹಿಳೆಯರ 400 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಜಿಸ್ನಾ ಮ್ಯಾಥ್ಯೂ ಫೈನಲ್‌ಗೆ ಅರ್ಹತೆ ಗಳಿಸಿದ್ದಾರೆ. ಮೊದಲ ದಿನ ಭಾರತ ತಂಡ ನಾಲ್ಕು ಪದಕಗಳನ್ನು ಗೆದ್ದಿದೆ‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry