ಶನಿವಾರ, ಮೇ 8, 2021
25 °C

ಉತ್ತಮ ಸಾಧನೆ ಮಾಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ತಂಡ ಈಚೆಗೆ ಫುಟ್‍ಬಾಲ್‍ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, ನಾಯಕ ಸುನಿಲ್ ಚೆಟ್ರಿ ಮಿಂಚುತ್ತಿದ್ದಾರೆ. ಚೆಟ್ರಿಯವರ ಮನವಿಗೆ ಓಗೊಟ್ಟು ಬಹಳಷ್ಟು ಕ್ರೀಡಾಸಕ್ತರು ಮೈದಾನಕ್ಕೆ ಹೋಗಿ ಪಂದ್ಯಗಳನ್ನು ನೋಡುತ್ತಿರುವುದು ಭಾರತದಲ್ಲಿ ಫುಟ್‍ಬಾಲ್ ಅಭಿಮಾನ ಹೆಚ್ಚುತ್ತಿರುವುದಕ್ಕೆ ನಿದರ್ಶನವಾಗಿದೆ.

ಹಿಂದೆ ನಗರವಾಸಿಗಳ ಮೆಚ್ಚಿನ ಆಟವಾಗಿದ್ದ ಫುಟ್‌ಬಾಲ್‌, ಐ-ಲೀಗ್, ಐಎಸ್‍ಎಲ್‍ನಂತಹ ಟೂರ್ನಿಗಳಿಂದಾಗಿ ಹಳ್ಳಿಹಳ್ಳಿಗಳಿಗೂ ವ್ಯಾಪಿಸುತ್ತಿದೆ. ಈ ಪ್ರೋತ್ಸಾಹ ಇನ್ನಷ್ಟು ಹೆಚ್ಚಿ, ನಮ್ಮಲ್ಲೂ ಪ್ರತಿಭಾವಂತ ಆಟಗಾರರು ರೂಪುಗೊಂಡು, ಬಲಿಷ್ಠ ತಂಡ ರಚನೆಯಾಗಿ ಫಿಫಾ ವಿಶ್ವಕಪ್ ಮತ್ತು ಒಲಿಂಪಿಕ್‌ ಕೂಟಗಳಲ್ಲೂ ಒಳ್ಳೆಯ ಪ್ರದರ್ಶನ ನೀಡುವಂತಾಗಲಿ.

– ಸುದರ್ಶನ ಎಚ್. ಯಡಹಳ್ಳಿ, ಬೆನಕಟ್ಟಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.