ಒಎನ್‌ಜಿಸಿ ವಿದೇಶ್‌ನ ಮೊದಲ ಕಚ್ಚಾ ತೈಲ ಮಂಗಳೂರಿಗೆ

7

ಒಎನ್‌ಜಿಸಿ ವಿದೇಶ್‌ನ ಮೊದಲ ಕಚ್ಚಾ ತೈಲ ಮಂಗಳೂರಿಗೆ

Published:
Updated:
ಒಎನ್‌ಜಿಸಿ ವಿದೇಶ್‌ನ ಮೊದಲ ಕಚ್ಚಾ ತೈಲ ಮಂಗಳೂರಿಗೆ

ಮಂಗಳೂರು: ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ವಿದೇಶಿ ಶಾಖೆ ‘ಒಎನ್‌ಜಿಸಿ ವಿದೇಶ್‌’ನಿಂದ ಮೊದಲ ಕಚ್ಚಾ ತೈಲದ ಸರಕನ್ನು ಒಎನ್‌ಜಿಸಿ–ಎಂಆರ್‌ಪಿಎಲ್‌ ಸ್ವೀಕರಿಸಿದ್ದು, ಶುಕ್ರವಾರ ಇಲ್ಲಿನ ನವ ಮಂಗಳೂರು ಬಂದರಿಗೆ ಬಂದಿದೆ.

ಅಬುಧಾಬಿಯ ಲೋವರ್‌ ಝಕುಮ್‌ ಆಯಿಲ್‌ ಫೀಲ್ಡ್‌ನಿಂದ ಈ ಸರಕನ್ನು ಸ್ವೀಕರಿಸಲಾಗಿದೆ ಎಂದು ಎಂಆರ್‌ಪಿಎಲ್‌–ಒಎನ್‌ಜಿಸಿ ಗ್ರೂಪ್‌ ಚೇರ್ಮನ್‌ ಶಶಿ ಶಂಕರ್‌  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಫಾಲ್ಕಂ ಆಯಿಲ್‌ ಆ್ಯಂಡ್‌ ಗ್ಯಾಸ್‌ ಡಚ್ ಕಂಪನಿ ಸಹಭಾಗಿತ್ವದ ಅಬುಧಾಬಿಯ ಲೋವರ್ ಝಕುಮ್‌ ಆಯಿಲ್‌ ಫೀಲ್ಡ್‌ನಲ್ಲಿ ಒಎನ್‌ಜಿಸಿ ವಿದೇಶ ಶಾಖೆಯು ಶೇ 10 ರಷ್ಟು ಪಾಲು ಹೊಂದಿದೆ. ಇಲ್ಲಿ ನಿತ್ಯ 4 ಲಕ್ಷ ಬ್ಯಾರೆಲ್‌ ಕಚ್ಚಾ ತೈಲ ಹೊರತೆಗೆಯಲಾಗುತ್ತಿದೆ.

‘ಫೆಬ್ರುವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಬುಧಾಬಿ ಭೇಟಿಯ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ 40 ವರ್ಷಗಳ ವಹಿವಾಟಿನ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರ ಭಾಗವಾಗಿ ಈ ಕಚ್ಚಾ ತೈಲ ಭಾರತಕ್ಕೆ ಬಂದಿದೆ. ಇದರಿಂದ ಎರಡೂ ದೇಶಗಳ ನಡುವಣ ವ್ಯಾಪಾರ, ವಹಿವಾಟು ವೃದ್ಧಿಗೆ ವೇದಿಕೆ ಸಿಕ್ಕಿದಂತಾಗಿದೆ’ ಎಂದರು.

ಒಎನ್‌ಜಿಸಿ ವಿದೇಶ್‌ನ ವ್ಯವಸ್ಥಾಪಕ ನಿರ್ದೇಶಕ ನರೇಂದ್ರ ಕುಮಾರ್ ವರ್ಮಾ, ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್‌, ಹಣಕಾಸು ನಿರ್ದೇಶಕ ಎ.ಕೆ. ಸಾಹು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry