7
ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ ಸಲಹೆ

ಇಂಧನ: ಸುಂಕ ಕಡಿತವೇ ಪರಿಹಾರ

Published:
Updated:
ಇಂಧನ: ಸುಂಕ ಕಡಿತವೇ ಪರಿಹಾರ

ಲಖನೌ: ತೈಲೋತ್ಪನ್ನಗಳ ದರ ನಿಯಂತ್ರಣಕ್ಕೆ ಸುಂಕ ಕಡಿತವೊಂದೇ ಉತ್ತಮ ಪರಿಹಾರವಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಅಭಿಪ್ರಾಯಪಟ್ಟಿದೆ.

‘ಇಂಧನಗಳ ತೆರಿಗೆ ದರ ತಗ್ಗಿಸುವುದರಿಂದ ರಫ್ತು ವಹಿವಾಟನ್ನು ಇನ್ನಷ್ಟು ಸ್ಪರ್ಧಾತ್ಮಕವಾಗಿಸಬಹುದು. ಚಾಲ್ತಿ ಖಾತೆ ಕೊರತೆಯನ್ನು ತಗ್ಗಿಸಬಹುದು. ರೂಪಾಯಿ ಮೌಲ್ಯ ಕುಸಿತವೂ ಎದುರಾಗುವುದಿಲ್ಲ’ ಎಂದು ‘ಅಸೋಚಾಂ’ನ ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ರಾವತ್‌ ಹೇಳಿದ್ದಾರೆ.

‘ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ಹಾಗೆ ಮಾಡಿದರೆ ಮಾತ್ರ ಭಾರತದ ಇಂಧನ ದರವು ಅಂತರರಾಷ್ಟ್ರೀಯ ದರಕ್ಕೆ ಸಮನಾಗಲು ಸಾಧ್ಯ. ಆಗ ಸರ್ಕಾರ ನಿಯಂತ್ರಣ ಮಾಡುವ ಪ್ರಶ್ನೆಯೇ ಎದುರಾಗುವುದಿಲ್ಲ. ಜನರು ಸಹ ಇಂಧನವನ್ನು ಬೇರೆ ಉತ್ಪನ್ನಗಳಂತೆಯೇ ಪರಿಗಣಿಸುತ್ತಾರೆ’ ಎಂದು ರಾವತ್‌ ತಮ್ಮ ವಾದ ಮಂಡಿಸಿದ್ದಾರೆ.

‘ಇಂಧನ ದರ ತುಟ್ಟಿಯಾಗುವುದರಿಂದ ಕೇವಲ ದೇಶದ ಆರ್ಥಿಕತೆಯ ಮೇಲಷ್ಟೇ ಅಲ್ಲದೆ ಕುಟುಂಬದ ಖರ್ಚು ಮತ್ತು ಉಳಿತಾಯದ ಮೇಲೆಯೂ ಪರಿಣಾಮ ಬೀರುತ್ತದೆ. ಆಮದಾಗಿರುವ ಒಂದು ಲೀಟರ್‌ ಕಚ್ಚಾ ತೈಲದ ದರ ₹ 26 ಇದೆ. ಅದಕ್ಕೆ ಆರಂಭಿಕ ತೆರಿಗೆ, ಸಂಸ್ಕರಣೆ, ಪೂರೈಕೆ ವೆಚ್ಚವೂ ಸೇರಿ ವಿತರಕರಿಗೆ ₹ 30ಕ್ಕೆ ಸಿಗುತ್ತದೆ. ಅದಕ್ಕೆ ₹ 19 ಎಕ್ಸೈಸ್‌ ಸುಂಕ, ₹ 3 ವಿತರಕರ ಕಮಿಷನ್‌ ಹಾಗೂ ರಾಜ್ಯಗಳು ವಿಧಿಸುವ ವ್ಯಾಟ್ ಸೇರಿ ಅಂತಿಮವಾಗಿ ಗ್ರಾಹಕರಿಗೆ ₹ 77ಕ್ಕೆ ಮಾರಾಟವಾಗುತ್ತದೆ’ ಎಂದು ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry