ಜೂನಿಯರ್‌ ಎನ್‌ಬಿಎ ಟೂರ್ನಿಗೆ ಆಯ್ಕೆ

7

ಜೂನಿಯರ್‌ ಎನ್‌ಬಿಎ ಟೂರ್ನಿಗೆ ಆಯ್ಕೆ

Published:
Updated:
ಜೂನಿಯರ್‌ ಎನ್‌ಬಿಎ ಟೂರ್ನಿಗೆ ಆಯ್ಕೆ

ಮಂಡ್ಯ: ಜೂನಿಯರ್‌ ಎನ್‌ಬಿಎ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿ ರುವ ಭಾರತದ ಬ್ಯಾಸ್ಕೆಟ್‌ಬಾಲ್‌ ತಂಡದಲ್ಲಿ ಮಂಡ್ಯದ ಇಬ್ಬರು ಬಾಲಕಿಯರು ಸ್ಥಾನ ಪಡೆದುಕೊಂಡಿದ್ದಾರೆ.

ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಹಾಸ್ಟೆಲ್‌ನ ಕ್ರೀಡಾಪಟುಗಳಾದ ನಗರದ ಕಾರ್ಮೆಲ್‌ ಶಾಲೆಯ ವಿದ್ಯಾರ್ಥಿನಿಯರಾದ ಆರ್‌.ಎನ್‌.ಹಂಸಾ, ಎಂ.ಮೇಘನಾ ಆಯ್ಕೆಯಾಗಿ ದ್ದಾರೆ. ಜೂನಿಯರ್‌ ಎನ್‌ಬಿಎ ವಿಶ್ವ ಚಾಂಪಿಯನ್‌ಷಿಪ್‌ ಅಮೆರಿಕದ ಒರ್ಲಾಂಡೊದಲ್ಲಿ ಆಗಸ್ಟ್‌ 7ರಿಂದ 12ರ ವರೆಗೆ ನಡೆಯಲಿದೆ.

ಉತ್ತರ ಪ್ರದೇಶದ ನೊಯಿಡಾದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಹಂಸಾ, ಮೇಘನಾ ಉತ್ತಮ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಕೋಚ್‌ ಸಿ.ಬಿ.ಭರತ್‌ರಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry