ಇಂದಿನಿಂದ ಮೋದಿ ಚೀನಾ ಪ್ರವಾಸ

7

ಇಂದಿನಿಂದ ಮೋದಿ ಚೀನಾ ಪ್ರವಾಸ

Published:
Updated:

ಕಿಂಗ್ಡಾವೊ (ಚೀನಾ) : ಇಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ವಾರ್ಷಿಕ ಸಭೆಯಲ್ಲಿ ಭಾಗವಹಿಸಲು  ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿಗೆ ಬರಲಿದ್ದಾರೆ.

ಎರಡು ದಿನದ ಚೀನಾ ಪ್ರವಾಸದ ವೇಳೆ  ಭಯೋತ್ಪಾದನೆ ವಿರುದ್ಧ ಜಾಗತಿಕ ಮಟ್ಟದಲ್ಲಿ ಸಂಘಟಿತರಾಗಿ ಹೋರಾಟ, ವ್ಯಾಪಾರ ಮತ್ತು ಹೂಡಿಕೆ ವಲಯಗಳ ಬಗ್ಗೆ ಉಭಯ ದೇಶಗಳು ಸಹಕಾರ ನೀಡುವ ವಿಚಾರವಾಗಿ ಮಾತುಕತೆ ನಡೆಸಲಿದ್ದಾರೆ.

ವಾರದ ಹಿಂದೆ ಚೀನಾದ ವುಹಾನ್ ನಗರದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ಮೋದಿ ಭೇಟಿಯಾಗಿ ಚರ್ಚಿಸಿದ್ದರು. ಈ ವೇಳೆ ಕೈಗೊಂಡ ನಿರ್ಣಯಗಳ ಬಗ್ಗೆ ಷಿ ಅವರೊಂದಿಗೆ ಮತ್ತೆ ಚರ್ಚಿಸಲಿದ್ದಾರೆ.

ಎಸ್‌ಸಿಒ ಸಭೆಯಲ್ಲಿ ಭಾಗವಹಿಸಲು ಇರಾನ್‌ ಅಧ್ಯಕ್ಷ ಹಸನ್ ರೌಹಾನಿ ಶುಕ್ರವಾರ‌ವೇ ಚೀನಾಕ್ಕೆ ಬಂದಿಳಿದ್ದಾರೆ. ಉಳಿದ ದೇಶಗಳ ನಾಯಕರು ಶನಿವಾರ ಬರಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry