ಕರಿಕಾಲಾನ ‘ಥಾರ್’ ಜೊತೆ ಸೆಲ್ಫಿಗೆ ಅವಕಾಶ!

7

ಕರಿಕಾಲಾನ ‘ಥಾರ್’ ಜೊತೆ ಸೆಲ್ಫಿಗೆ ಅವಕಾಶ!

Published:
Updated:
ಕರಿಕಾಲಾನ ‘ಥಾರ್’ ಜೊತೆ ಸೆಲ್ಫಿಗೆ ಅವಕಾಶ!

ಮುಂಬೈ: ಕಾಲಾ ಸಿನಿಮಾದಲ್ಲಿ ರಜನೀಕಾಂತ್ ಬಳಸಿದ ಮಹೀಂದ್ರಾ ಕಂಪನಿಯ ಥಾರ್ ಜೀಪ್ ಜನಪ್ರಿಯವಾಗಿದೆ. ರಜನೀಕಾಂತ್ ಅಭಿಮಾನಿಗಳು ಜೀಪ್‌ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಚೆನ್ನೈನ ಸತ್ಯಂ ಸಿನಿಮಾಸ್‌ನಲ್ಲಿ ಸದ್ಯ ಇದನ್ನು ಪ್ರದರ್ಶನಕ್ಕಿಡಲಾಗಿದೆ.

ಕಾಲಾ ಸಿನಿಮಾದ ಪೋಸ್ಟರ್‌ನಲ್ಲೇ ಈ ಜೀಪ್‌ ಅನಾವರಣಗೊಂಡಿತ್ತು. ಅಂದು ಪೋಸ್ಟರ್ ನೋಡಿದ್ದ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಚಿತ್ರದ ನಿರ್ಮಾಪಕ ಧನುಷ್ ಅವರನ್ನು ಸಂಪರ್ಕಿಸಿದ್ದರು.

ಚಿತ್ರೀಕರಣ ಪೂರ್ಣಗೊಂಡ ಬಳಿಕ ಜೀಪನ್ನು ತಮಗೆ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ಧನುಷ್ ಒಪ್ಪಿದ್ದರು. ಹೀಗಾಗಿ ಥಾರ್ ಜೀಪ್, ಮಹೀಂದ್ರಾ ಕಂಪನಿಯ ವಸ್ತುಸಂಗ್ರಹಾಲಯ ಸೇರಲಿದೆ.

’ಕಾಲಾ’ ಚಿತ್ರ ಪ್ರದರ್ಶನ ರದ್ದು

ಬ್ಯಾಡಗಿ: ರಜನಿಕಾಂತ ಅಭಿನಯದ ‘ಕಾಲಾ’ ಚಿತ್ರ ಪ್ರದರ್ಶನಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ಪಟ್ಟಣದ ಶೋಭಾ ಚಿತ್ರಮಂದಿರದಲ್ಲಿ ಶುಕ್ರವಾರ ಚಿತ್ರ ಪ್ರದರ್ಶನವನ್ನು ರದ್ದು ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry