ಅಬಕಾರಿ ಆಯುಕ್ತ ಮನೀಶ್‌ ಮೌದ್ಗಿಲ್‌ ಮೇಲೆ ಸಿಟ್ಟಿಗೆದ್ದ ಸಿಎಂ

7
ಆಯುಕ್ತರು ಸರ್ಕಾರಕ್ಕಿಂತ ದೊಡ್ಡವರೇ? ಸಿ.ಎಂ

ಅಬಕಾರಿ ಆಯುಕ್ತ ಮನೀಶ್‌ ಮೌದ್ಗಿಲ್‌ ಮೇಲೆ ಸಿಟ್ಟಿಗೆದ್ದ ಸಿಎಂ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಬಕಾರಿ ಆಯುಕ್ತ ಮನೀಶ್‌ ಮೌದ್ಗಿಲ್‌ ಮೇಲೆ ಕೋಪಗೊಂಡು ಅಮಾನತುಗೊಳಿಸುವಂತೆ ಹೇಳಿದ ಘಟನೆ ನಡೆದಿದೆ.

ಚುನಾವಣೆ ಸಂದರ್ಭದಲ್ಲಿ ಇಲಾಖೆಯ ಮಹಿಳಾ ಇನ್‌ಸ್ಪೆಕ್ಟರ್‌ ಗಳನ್ನು ಬೇರೆ ಬೇರೆ ಕಡೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಚುನಾವಣೆ ಬಳಿಕ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೇ ವರ್ಗಾವಣೆ ಮಾಡುವಂತೆ ಕುಮಾರಸ್ವಾಮಿ ಸೂಚಿಸಿದ್ದರು. ಆದರೆ ಈವರೆಗೂ ತಮಗೆ ವರ್ಗಾವಣೆ ಮಾಡಲಿಲ್ಲ ಎಂದು ಮಹಿಳಾ ಇನ್‌ಸ್ಪೆಕ್ಟರ್‌ವೊಬ್ಬರು ಮುಖ್ಯಮಂತ್ರಿಗೆ ದೂರು ನೀಡಿದರು.

ಇದರಿಂದ ಸಿಟ್ಟಿಗೆದ್ದ ಕುಮಾರಸ್ವಾಮಿ, ಆಯುಕ್ತರೇನು ಸರ್ಕಾರಕ್ಕಿಂತ ದೊಡ್ಡವರೇ. ಸೋಮವಾರದೊಳಗಾಗಿ ಇಲಾಖೆಯ ಎಲ್ಲ ಮಹಿಳಾ ಇನ್ಸ್‌ಪೆಕ್ಟರ್‌ಗಳನ್ನು ಮರು ವರ್ಗಾವಣೆ ಮಾಡಬೇಕು. ಇಲ್ಲವಾದರೆ ಆಯುಕ್ತರನ್ನೇ ಅಮಾನತು ಮಾಡಿ’ ಎಂದು ಗುಡುಗಿದರು.

ಅಧಿಕಾರಿಗಳಿಗೆ ಹಿರಿತನವಿದ್ದಷ್ಟೇ ಸಾಲದು ಮಾನವೀಯತೆಯೂ ಇರಬೇಕು. ಸರ್ಕಾರಕ್ಕಿಂತ ಯಾರೂ ದೊಡ್ಡವರಲ್ಲ ಎಂದರು.

ತಕ್ಷಣವೇ ಮರು ವರ್ಗಾವಣೆ ಮಾಡುವುದಾಗಿ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಹೇಳಿದರು.

ವಿಶೇಷಾಧಿಕಾರಿ ನೇಮಕ: ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎನ್‌.ಕೃಷ್ಣಯ್ಯ ಅವರನ್ನು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯ ಅಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎನ್‌.ಕೃಷ್ಣಯ್ಯ ಅವರನ್ನು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯ ಅಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry