ಮುಂಬೈನ ಪಟೇಲ್‌ ಚೇಂಬರ್ಸ್‌ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ, ಇಬ್ಬರು ಅಗ್ನಿ ಶಾಮಕ ಸಿಬ್ಬಂದಿಗೆ ಗಾಯ

7

ಮುಂಬೈನ ಪಟೇಲ್‌ ಚೇಂಬರ್ಸ್‌ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ, ಇಬ್ಬರು ಅಗ್ನಿ ಶಾಮಕ ಸಿಬ್ಬಂದಿಗೆ ಗಾಯ

Published:
Updated:

ಮುಂಬೈ: ಮುಂಬೈನ ಫೋರ್ಟ್‌ ಪ್ರದೇಶದಲ್ಲಿನ ಪಟೇಲ್‌ ಚೇಂಬರ್ಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. 18 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಬಂದಿದ್ದು, ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ತೊಡಗಿದ್ದಾರೆ. ಈ ವೇಳೆ ಇಬ್ಬರು ಅಗ್ನಿಶಾಮಕ ಅಧಿಕಾರಿಗಳಿಗೆ ಗಾಯಗೊಂಡಿದ್ದಾರೆ.

ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. 12 ಅಗ್ನಿಶಾಮ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ತೊಡಗಿದ್ದವು. ಆದರೆ, ಬೆಂಕಿಯ ಜ್ವಾಲೆ ಹೆಚ್ಚಿ ನಾಲ್ಕನೇ ಮಹಡಿಗೆ ವ್ಯಾಪಿಸಿದೆ. ಇದಾಗುತ್ತಿದ್ದಂತೆ ಮತ್ತಷ್ಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿವೆ. ಒಟ್ಟು 18 ಅಗ್ನಿಶಾಮಕ ವಾಹನಗಳೊಟ್ಟಿಗೆ ಬಂದಿರುವ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಮಾಡುತ್ತಿದ್ದಾರೆ.

ಕಟ್ಟಡದ ಒಂದು ಭಾಗ ಹಾನಿಗೊಳಗಾದ ಪರಿಣಾಮ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದ ಇಬ್ಬರು ಅಗ್ನಿಶಾಮಕ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry