ವಿಧಾನ ಪರಿಷತ್ ಚುನಾವಣೆ ಶಾಂತಿಯುತ

7
ನೈರುತ್ಯ ಶಿಕ್ಷಕರ–ಪದವೀಧರರ ಕ್ಷೇತ್ರಗಳಿಗೆ ಮತದಾನ

ವಿಧಾನ ಪರಿಷತ್ ಚುನಾವಣೆ ಶಾಂತಿಯುತ

Published:
Updated:
ವಿಧಾನ ಪರಿಷತ್ ಚುನಾವಣೆ ಶಾಂತಿಯುತ

ಮಂಗಳೂರು: ನೈರುತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಶುಕ್ರವಾರ ನಡೆದ ಚುನಾವಣೆ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಪೂರ್ಣಗೊಂಡಿದೆ.

ಶಿಕ್ಷಕರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ 7,140 ಮತದಾರರ ಪೈಕಿ, 5,438 ಜನರು ಮತ ಚಲಾಯಿಸಿದ್ದು, ಶೇ 76.16ರಷ್ಟು ಮತದಾನವಾಗಿದೆ. ಪದವೀಧರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ 15,494 ಮತದಾರರ ಪೈಕಿ, 10,011 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ 64.61 ರಷ್ಟು ಮತದಾನವಾಗಿದೆ.

ಜಿಲ್ಲೆಯಾದ್ಯಂತ ಪದವೀಧರ ಕ್ಷೇತ್ರಕ್ಕೆ 24 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 13 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಿಗ್ಗೆಯಿಂದ ನೀರಸ ಮತದಾನ ನಡೆದರೂ, ಮಧ್ಯಾಹ್ನದ ನಂತರ ಚುರುಕುಗೊಂಡಿತ್ತು.

ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮೂಲ್ಕಿಯಲ್ಲಿ 152, ಮೂಡುಬಿದಿರೆ ಯಲ್ಲಿ 598, ಸುರತ್ಕಲ್‌ನಲ್ಲಿ 485, ಬಜ್ಪೆಯಲ್ಲಿ 64, ಗುರುಪುರದಲ್ಲಿ 170, ಹಂಪನಕಟ್ಟೆಯ ಎರಡು ಮತಗಟ್ಟೆಗಳಲ್ಲಿ 1,190, ಕೊಣಾಜೆಯಲ್ಲಿ 89, ಬಬ್ಬು ಕಟ್ಟೆಯಲ್ಲಿ 196, ಬಂಟ್ವಾಳದಲ್ಲಿ 657, ಬೆಳ್ತಂಗಡಿಯಲ್ಲಿ 731, ಪುತ್ತೂರಿನಲ್ಲಿ 656, ಸುಳ್ಯದಲ್ಲಿ 345, ಪಂಜದಲ್ಲಿ 105 ಮತದಾರರು ಮತ ಚಲಾಯಿಸಿದ್ದಾರೆ.

ಪದವೀಧರ ಕ್ಷೇತ್ರದ ಚುನಾವಣೆ ಯಲ್ಲಿ ಮೂಲ್ಕಿಯಲ್ಲಿ 271, ಮೂಡುಬಿದಿರೆಯಲ್ಲಿ 719, ಸುರತ್ಕಲ್‌ನಲ್ಲಿ 852, ಬಜ್ಪೆಯಲ್ಲಿ 135, ಗುರುಪುರದಲ್ಲಿ 310, ನಗರದ ಹಂಪನಕಟ್ಟೆಯ ಐದು ಮತಗಟ್ಟೆಗಳಲ್ಲಿ 2,580, ಕೊಣಾಜೆಯಲ್ಲಿ 176, ಬಬ್ಬುಕಟ್ಟೆಯಲ್ಲಿ 356, ಬಂಟ್ವಾಳದಲ್ಲಿ 1,768, ಬೆಳ್ತಂಗಡಿಯಲ್ಲಿ 806, ಪುತ್ತೂರಿನಲ್ಲಿ 1,337, ಸುಳ್ಯದಲ್ಲಿ 544, ಪಂಜದಲ್ಲಿ 157 ಜನರು ಮತ ಚಲಾಯಿಸಿದ್ದಾರೆ.

ಪುತ್ತೂರಿನಲ್ಲಿ ಕೇಂದ್ರ ಸಚಿವ ಸದಾನಂದ ಗೌಡ, ನಗರದ ಹಂಪನಕಟ್ಟೆಯಲ್ಲಿ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಗಣೇಶ್‌ ಕಾರ್ಣಿಕ್‌ ಮತ ಚಲಾಯಿಸಿದರು.

ಜಿಲ್ಲೆಯಾದ್ಯಂತ ಮತಗಟ್ಟೆಗಳ ಸುತ್ತ ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿದ್ದು, ಅಗತ್ಯ ಭದ್ರತೆಯನ್ನು ಒದಗಿಸಲಾಗಿತ್ತು. ಸಂಜೆಯ ನಂತರ ಮತ ಪೆಟ್ಟಿಗೆಗಳನ್ನು ಮೈಸೂರಿನ ಮಹಾರಾಣಿ ಕಾಲೇಜಿಗೆ ರವಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry