ಭಾರಿ ಮಳೆಗೆ ಭೋರ್ಗರೆದ ಹಿರೇಹಳ್ಳ

7

ಭಾರಿ ಮಳೆಗೆ ಭೋರ್ಗರೆದ ಹಿರೇಹಳ್ಳ

Published:
Updated:
ಭಾರಿ ಮಳೆಗೆ ಭೋರ್ಗರೆದ ಹಿರೇಹಳ್ಳ

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ, ಮುತ್ತಗಿ, ಮಸಬಿನಾಳ, ಇಂಗಳೇಶ್ವರ, ಹೂವಿನಹಿಪ್ಪರಗಿ ಹಾಗೂ ತಾಲ್ಲೂಕಿನ ಬಹುತೇಕ ಭಾಗದಲ್ಲಿ ಶುಕ್ರವಾರ ಮಳೆಯಾಗಿದೆ.

ಬೆಳಿಗ್ಗೆ ದಟ್ಟ ಮೋಡ ಕವಿದ ವಾತಾವರಣದೊಂದಿಗೆ ಆರಂಭದಲ್ಲಿ ಕೆಲ ನಿಮಿಷ ಜಿಟಿ, ಜಿಟಿ ಮಳೆ ಸುರಿಯಿತು. ಬೆಳಿಗ್ಗೆ 8ರ ಸುಮಾರಿಗೆ ಜೋರಾದ ಮಳೆ ಆರಂಭವಾಗಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿಯಿತು. ನಂತರ ಮಧ್ಯಾಹ್ನದ ವರೆಗೆ ಮಳೆಯಾಯಿತು.

ಮಳೆಯಿಂದಾಗಿ ಹೊಲಗಳಲ್ಲಿ ನೀರು ಹರಿಯಿತು. ಕೆಲವೆಡೆ ಬದುವಿನಲ್ಲಿ ನೀರು ತುಂಬಿಕೊಂಡಿದ್ದರಿಂದ ಪಕ್ಕದ ಜಮೀನುಗಳಿಗೆ ಹರಿದು ಹೋಗುತ್ತಿರುವುದು ಕಂಡು ಬಂದಿತು. ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಹಳ್ಳಗಳಲ್ಲಿ ನೀರು ಹರಿಯಿತು.

ನಿಡಗುಂದಿ: ಸಾಧಾರಣ ಮಳೆ

ನಿಡಗುಂದಿ: ನಿಡಗುಂದಿ ಸುತ್ತಮುತ್ತ ಮಿರಗಾ ಮಳೆ ಶುಕ್ರವಾರ ಅಬ್ಬರಿಸದೇ ಶಾಂತವಾಗಿ ಕೆಲ ಕಾಲ ಸುರಿದು, ಮೋಡ ಕವಿದ ವಾತವರಣ ಸೃಷ್ಟಿಸಿತು. ಬೆಳಿಗ್ಗೆ 10 ಕ್ಕೆ ಆರಂಭಗೊಂಡ ಮಳೆ ಒಂದು ಗಂಟೆಗಳ ಕಾಲ ಜಿಟಿ ಜಿಟಿಯಾಗಿ ಸುರಿಯಿತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಅದು ಸಂಜೆಯವರೆಗೂ ಮುಂದುವರೆಯಿತು. ಮಳೆಯಿಂದಾಗಿ ತಂಪು ವಾತಾವರಣ ನಿರ್ಮಾಣವಾಯಿತು.

ದಿನವಿಡೀ ಮುಸುಕು ಕವಿದ ವಾತಾವರಣ ಮದ್ಯೆ ಜಿನುಗು ಮಳೆ ಹನಿಗಳು ಬಿದ್ದು ಎಲ್ಲರ ಮೊಗದಲ್ಲಿ ಸಂತಸ ಮೂಡಿಸಿದವು.

ವಂದಾಲ, ಚಿಮ್ಮಲಗಿ ಗ್ರಾಮದಲ್ಲಿ ಮಳೆಯ ಸಿಂಚನ ಜೋರಾಗಿಯೇ ಇತ್ತು. ಆದರೆ ಆಲಮಟ್ಟಿಯಲ್ಲಿ ಮಾತ್ರ ಸಾಧಾರಣ ಮಳೆಯಾಯಿತು.

ಒಟ್ಟಾರೇ ಮಿರಗಾ ಮಳೆ ಆರಂಭದಲ್ಲಿಯೇ ಮಳೆ ಸುರಿಸಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry