ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಮಧ್ಯಾಹ್ನದವರೆಗೆ ಚುರುಕು

Last Updated 9 ಜೂನ್ 2018, 8:58 IST
ಅಕ್ಷರ ಗಾತ್ರ

ಸಿಂಧನೂರು: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಶುಕ್ರವಾರ ಸಿಂಧ ನೂರು ನಗರ ಸೇರಿದಂತೆ ತಾಲ್ಲೂಕಿನ ಒಟ್ಟು ಐದು ಮತಗಟ್ಟೆಗಳಲ್ಲಿ ಶೇ62.63 ರಷ್ಟು ಶಾಂತಿಯುತ ಮತದಾನವಾಗಿದೆ.

ಬೆಳಿಗ್ಗೆ 8ರಿಂದ ಆರಂಭವಾದ ಮತದಾನ ಪ್ರಕ್ರಿಯೆ ಮಧ್ಯಾಹ್ನದವರೆಗೂ ಚುರುಕಾಗಿತ್ತು. ಮಧ್ಯಾಹ್ನ 2 ರಿಂದ 3.30ರವರೆಗೆ ನಿರಂತರವಾಗಿ ಮಳೆ ಸುರಿದ ಕಾರಣ ಮತದಾನದ ಪ್ರಕ್ರಿಯೆ ನಿರಸವಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತಗಟ್ಟೆ ಕೇಂದ್ರಗಳ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.

ಕಾಂಗ್ರೆಸ್‌ ಪರ ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ, ಆರ್‍ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರಸಭೆ ಸದಸ್ಯರಾದ ಪ್ರಭುರಾಜ್, ಶೇಖರಪ್ಪ ಗಿಣಿವಾರ, ನಬೀಸಾಬ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್, ಮುಖಂಡರಾದ ಎಸ್.ಶರಣೇಗೌಡ, ಸಂಜಯ್ ಪಾಟೀಲ್, ಮರ್ತುಜಾಹುಸೇನ್, ಜೆಡಿಎಸ್ ಅಭ್ಯರ್ಥಿಯ ಪರ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲಿಂಗಪ್ಪ, ನಗರಸಭೆ ಸದಸ್ಯರಾದ ಲಿಂಗರಾಜ್ ಹೂಗಾರ, ಶರಣಬಸವ ನಟೇಕಲ್, ಮುಖಂಡರಾದ ಬಿ.ಹರ್ಷ, ದಾಸರಿ ಸತ್ಯನಾರಾಯಣ, ಧರ್ಮನಗೌಡ ಮಲ್ಕಾಪುರ, ಸುಮಿತ್ ತಡಕಲ್, ಬಿಜೆಪಿ ಅಭ್ಯರ್ಥಿಯ ಪರ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಮಹಿಳಾ ಮುಖಂಡರಾದ ಮಮತಾ ಹಿರೇಮಠ, ಪ್ರೇಮಾ ಸಿದ್ದಾಂತಿಮಠ, ಮುಖಂಡರಾದ ಸುಬ್ಬಾರಾವ್, ಪ್ರಶಾಂತ ಕಿಲ್ಲೇದ್ ಹಾಗೂ ವಿವಿಧ ಪಕ್ಷೇತರ ಅಭ್ಯರ್ಥಿಗಳ ಪರ ಮುಖಂಡರು, ಕಾಲೇಜು ಉಪನ್ಯಾಸಕರು ಮತಗಟ್ಟೆ ಕೇಂದ್ರಗಳ ಮುಂಭಾಗದಲ್ಲಿ ನಿಂತು ಗುರುತಿನ ಚೀಟಿ ವಿತರಿಸಿ ತಮ್ಮ ತಮ್ಮ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿರುವುದು ಕಂಡು ಬಂತು.

ಮತದಾನದ ವಿವರ: ಮಿನಿವಿಧಾನಸೌಧ ಕಚೇರಿಯ ಮತಗಟ್ಟೆ ಕೇಂದ್ರದಲ್ಲಿ 993 ಮತದಾರರಲ್ಲಿ  678, ತಾಲ್ಲೂಕು ಪಂಚಾಯಿತಿ ಕೇಂದ್ರದಲ್ಲಿ 640 ಮತದಾರರಲ್ಲಿ 420, ತುರ್ವಿಹಾಳ ಸರ್ಕಾರಿ ಪ್ರೌಢಶಾಲೆಯ ಕೇಂದ್ರದಲ್ಲಿ 283ಮತದಾರರಲ್ಲಿ 197, ಜವಳಗೇರಾ ಸರ್ಕಾರಿ ಪ್ರೌಢಶಾಲೆ ಕೇಂದ್ರದ 148 ಮತದಾರರಲ್ಲಿ 100, ಗುಡದೂರು ಗ್ರಾಮ ಪಂಚಾಯಿತಿ ಕೇಂದ್ರದ 179 ಮತದಾರರಲ್ಲಿ 110 ಮಂದಿ ಮತ ಚಲಾಯಿಸಿದ್ದಾರೆ. ಸಿಂಧನೂರು ಕ್ಷೇತ್ರದಲ್ಲಿ ಒಟ್ಟು 2243 ಮತದಾರರ ಪೈಕಿ 1405 ಮತದಾರರ ಮತ ಚಲಾಯಿಸಿದ್ದಾರೆ. ಒಟ್ಟು ಶೇ 62.63 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಉಮಾಕಾಂತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT