ಬಾದಾಮಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಮಳೆ

7

ಬಾದಾಮಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಮಳೆ

Published:
Updated:
ಬಾದಾಮಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಮಳೆ

ಬಾದಾಮಿ: ‌ಪಟ್ಟಣದ ಸೇರಿದಂತೆ ಬೇಲೂರ, ಕುಳಗೇರಿ ಮತ್ತು ಪಟ್ಟದಕಲ್ಲು ಭಾಗದಲ್ಲಿ ಶುಕ್ರವಾರ ಎರಡು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿಯಿತು. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಹಾಗೂ ಸಜ್ಜಾಗಿರುವ ರೈತರ ಮೊಗದಲ್ಲಿ ಈ ಮಳೆ ಮಂದಹಾಸ ಮೂಡಿಸಿದೆ.

ಮೃಗಶಿರಾ ಮಳೆ ಮಧ್ಯಾಹ್ನ 12ರಿಂದ 2 ಗಂಟೆಯ ವರೆಗೂ ಸುರಿಯಿತು. ಬೇಲೂರ, ಮಣ್ಣೇರಿ, ಹಿರೇನಸಬಿ ಚಿಕ್ಕನಸಬಿ, ಚೊಳಚಗುಡ್ಡ, ಖ್ಯಾಡ , ಕಾತರಕಿ, ಅಡಗಲ್‌, ಕಬ್ಬಲಗೇರಿ, ಕುಟುಕನಕೇರಿ, ಕೆಂದೂರ ,ಬಿ.ಎನ್‌. ಜಾಲಿಹಾಳ, ನಂದಿಕೇಶ್ವರ, ಮಹಾಕೂಟ, ನೆಲವಗಿ ಗ್ರಾಮಗಳ ಸುತ್ತ ಮುತ್ತ ವರ್ಷಧಾರೆಯಾಗಿದೆ.

ಮೊದಲೇ ಬಿತ್ತನೆ ಮಾಡಿದ ಹೊಲಗಳಲ್ಲಿ ಪೈರು ಬೆಳೆದಿದ್ದು ಅವರಿಗೆ ಮಳೆಯಿಂದ ಅನುಕೂಲವಾಗಿದೆ. ಅಲ್ಲದೆ ಬಿತ್ತನೆ ಕಾರ್ಯವನ್ನು ಸಹ ಮಳೆ ಸರಾಗವಾಗಿಸಿದೆ ಎಂದು ರೈತ ಬಸಪ್ಪ ಪಾಟೀಲ ಹೇಳಿದರು. ಬಾದಾಮಿ ಬೆಟ್ಟದ ಮೇಲಿಂದ ಜೋಡಿ ಜಲಪಾತಗಳು ಅಗಸ್ತ್ಯತೀರ್ಥ ಹೊಂಡಕ್ಕೆ ಧುಮ್ಮಿಕ್ಕಿದವು. ನಿಸರ್ಗ ಪ್ರಿಯರು ಜಲಪಾತಗಳನ್ನು ವೀಕ್ಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry