‘ಪ್ಲಾಸ್ಟಿಕ್‌ನಿಂದ ಪರಿಸರ ಕಲುಷಿತ’

7

‘ಪ್ಲಾಸ್ಟಿಕ್‌ನಿಂದ ಪರಿಸರ ಕಲುಷಿತ’

Published:
Updated:

ಶಿಗ್ಗಾವಿ: ‘ಮಕ್ಕಳ ಜನ್ಮದಿನದ ಸಂಭ್ರಮ ಸಸಿ ನೆಡುವಾಗಲೂ ಇರಬೇಕು. ಅಂಥ ಕಾಳಜಿ ವಹಿಸಿದರೆ, ಪರಿಸರ ದಿನಾಚರಣೆ  ಅರ್ಥಪೂರ್ಣ ಕಾರ್ಯಕ್ರಮ ಆಗುತ್ತದೆ’ ಎಂದು ಬಿಇಒ ಶಿವಾನಂದ ಹೆಳವರ ಹೇಳಿದರು.

ತಾಲ್ಲೂಕಿನ ಬನ್ನೂರ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಡುವ

ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಉರ್ದು ಸಿಆರ್‌ಪಿ ಹಿದಾಯತ್‌ ಉಲ್ಲಾ ರಟ್ಟೀಹಳ್ಳಿ ಮಾತನಾಡಿ, ‘ಪ್ಲಾಸ್ಟಿಕ್‌ನಿಂದ ಇಡೀ ವಾತಾವರಣ ಕಲುಷಿತವಾಗುತ್ತಿದೆ. ಅದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಜನರು ಸ್ವಯಂ ಪ್ರೇರಣೆಯಿಂದ ಪ್ಲಾಸ್ಟಿಕ್‌ ಬಳಕೆಯಿಂದ ದೂರ ಆಗಬೇಕಾಗಿದೆ’ ಎಂದು ಸಲಹೆ ನೀಡಿದರು. ತಾಲ್ಲೂಕು ಶಿಕ್ಷಣ ಸಮನ್ವಯ ಅಧಿಕಾರಿ ಮಂಜುಳಾ ಚಂದ್ರಗೇರಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ನೂರಅಹ್ಮದ್ ಶೇತಸನದಿ, ಅಬ್ದುಲ್‌ರಜಾಕ್‌ ಮದ್ದುಶಾನವರ, ಅಹ್ಮದ್‌ಬಾಷಾ ಕಂಡೊಳ್ಳಿ, ಬಾನುಬಿ ಶೇತಸನದಿ, ಮುಕ್ತುಮಬಿ, ಖ್ವಾಜಾಸಾಬ್, ನೂರಅಹ್ಮದ್‌ ಅಬ್ದುಲ್‌ಗನಿ, ಮುಖ್ಯ ಶಿಕ್ಷಕ ಎಂ.ಬಿ.ಬ್ಯಾಡಗಿ, ಅಲ್ಫಿಯಾ ಮುಲ್ಲಾ, ಆಯೆಷಾ ಇದ್ದರು.

‘ಅರಣ್ಯ ಸಂರಕ್ಷಣೆ ಎಲ್ಲರ ಹೊಣೆ’

ಶಿಗ್ಗಾವಿ: ‘ಪೃಥ್ವಿಯ ಮೇಲಿನ ಸಕಲ ಜೀವರಾಶಿಗಳಿಗೆ ಪರಿಸರವೇ ಜೀವಾಳ. ಹೀಗಾಗಿ ಪರಿಸರ ಕಾಪಾಡುವ ಮೂಲಕ ಸಸ್ಯ ಸಂಪತ್ತು ಉಳಿಸಿ ಬೆಳೆಸುವ ಸಂಕಲ್ಪ ಮಾಡುವುದು ಇಂದಿನ ತುರ್ತು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಹೆಳವರ ಅಭಿಪ್ರಾಯಪಟ್ಟರು.

ಪಟ್ಟಣದ ಫಿನಿಕ್ಸ್‌ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ, ಪತ್ರಿಕಾ ವಿತರಕರ ಬಳಗದ ಸಹಯೋಗದಲ್ಲಿ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅರಣ್ಯ ಸಂಪತ್ತು ನಾಶದಿಂದ ಮನುಷ್ಯರ ಆಯುಷ್ಯ ಕಡಿಮೆಯಾಗುತ್ತಿದೆ. ಋತುಮಾನಗಳಲ್ಲಿ ಅಸಮತೋಲನ ಉಂಟಾಗಿ ಆಹಾರ ಉತ್ಪಾದನೆ ಇಳಿಮುಖವಾಗಿದೆ. ಹೀಗಾಗಿ ಎಲ್ಲರೂ ಸಸಿಗಳನ್ನು ಬೆಳೆಸಿ ಅರಣ್ಯ ಸಂಪತ್ತು ಹೆಚ್ಚಿಸುವ ಮೂಲಕ ನಮ್ಮಿಂದಾದ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದೆ’ ಎಂದರು.

ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೃತ್ಯುಂಜಯ ತಿರ್ಲಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಅರಣ್ಯ ಸಂರಕ್ಷಣೆ ಕೇವಲ ಸರ್ಕಾರದ ಕೆಲಸವಲ್ಲ. ಅದು ಪ್ರತಿಯೊಬ್ಬರ ಹೊಣೆ. ಸ್ಥಳೀಯ ಸಂಘ, ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸುವುದು ಅಗತ್ಯ’ ಎಂದರು.

ಸಂಸ್ಥೆ ಕಾರ್ಯದರ್ಶಿ ಡಾ.ರಾಣಿ ತಿರ್ಲಾಪುರ, ತಾಲ್ಲೂಕು ಶಿಕ್ಷಣ ಸಮನ್ವಯ ಅಧಿಕಾರಿ ಮಂಜುಳಾ ಚಂದ್ರಗೇರಿ, ವಕೀಲ ಬಸವರಾಜ ಜಕ್ಕಿನಕಟ್ಟಿ, ಡಾ.ಆರಾಧ್ಯಮಠ, ಪತ್ರಿಕಾ ವಿತರಕರಾದ ವಿರೂಪಾಕ್ಷ ನೀರಲಗಿ, ಸಿದ್ರಾಮಗೌಡ ಮೇಳ್ಳಾಗಟ್ಟಿ, ಹನುಮಂತ ಬಂಡಿವಡ್ಡರ, ರವಿ ಉಡುಪಿ, ಬಸವರಾಜ ಹಡಪದ ಇದ್ದರು.‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry