ಭಾರತೀಯರ ಅವಹೇಳನ ಕ್ಷಮೆಯಾಚಿಸಿದ ಎಬಿಸಿ

7

ಭಾರತೀಯರ ಅವಹೇಳನ ಕ್ಷಮೆಯಾಚಿಸಿದ ಎಬಿಸಿ

Published:
Updated:
ಭಾರತೀಯರ ಅವಹೇಳನ ಕ್ಷಮೆಯಾಚಿಸಿದ ಎಬಿಸಿ

ಮುಂಬೈ: ಅಮೆರಿಕದಲ್ಲಿ ಇತ್ತೀಚಿಗೆ ಪ್ರಸಾರಗೊಳ್ಳಲು ಆರಂಭಿಸಿದ ನಟಿ ಪ್ರಿಯಾಂಕ ಚೋಪ್ರಾ ಅಭಿನಯದ ‘ಕ್ವಾಂಟಿಕೊ‘ ಟಿ.ವಿ ಧಾರಾವಾಹಿಯ ನಿರ್ಮಾಣ ಸಂಸ್ಥೆ ‘ಎಬಿಸಿ’ ಭಾರತೀಯ ಅಭಿಮಾನಿಗಳ ಕ್ಷಮೆಕೋರಿದೆ.

ಕ್ವಾಂಟಿಕೊ ಸರಣಿಯಲ್ಲಿ ಪ್ರಿಯಾಂಕ ಅವರು ಎಫ್‌ಬಿಐ ಏಜೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ.  ಮ್ಯಾನ್‌ಹಟನ್‌ನಲ್ಲಿ ನಡೆದ ಬಾಂಬ್‌ ಸ್ಫೋಟಕ್ಕೆ ಭಾರತದ ರಾಷ್ಟ್ರೀಯವಾದಿಗಳು ಸಂಚು ರೂಪಿಸಿದ್ದರೂ ಇದಕ್ಕೆ  ಪಾಕಿಸ್ತಾನ ಕಾರಣವೆನ್ನುತ್ತಿದ್ದಾರೆ ಎಂದು ಒಂದು ಸಂಚಿಕೆಯಲ್ಲಿ ತೋರಿಸಲಾಗಿತ್ತು. ಅಲ್ಲದೆ ಸ್ಥಳದಲ್ಲಿ ಬಿದ್ದಿದ್ದ ರುದ್ರಾಕ್ಷಿಯಿಂದಾಗಿ ಪ್ರಿಯಾಂಕ ಅವರು ಆರೋಪಿಯನ್ನು ಪತ್ತೆಹಚ್ಚುವುದು ಕೂಡ ಕಥಾಭಾಗವಾಗಿತ್ತು.

ಈ ಸಂಚಿಕೆ ಪ್ರಸಾರಗೊಂಡ ಬೆನ್ನಲ್ಲೇ ಪ್ರಿಯಾಂಕ ವಿರುದ್ಧ ಭಾರತೀಯರು ಆನ್‌ಲೈನ್‌ನಲ್ಲಿ ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ಕೆಲವರು ಅವರ ಸಿನಿಮಾ ಬಹಿಷ್ಕರಿಸುವಂತೆ ಕರೆನೀಡಿದ್ದರು.

ಆ ಬಳಿಕ ಎಬಿಸಿ ಸಂಸ್ಥೆ ಕ್ಷಮೆಕೋರಿದೆ. ‘ ಈ ಸಂಚಿಕೆಯನ್ನು ಪ್ರಿಯಾಂಕ ನಿರ್ಮಿಸಿಲ್ಲ, ಅಲ್ಲದೇ ಅವರು ಕಥೆ ಬರೆದಿಲ್ಲ  ಅಥವಾ ನಿರ್ದೇಶನ ಮಾಡಿಲ್ಲ. ಅದೊಂದು ಕಾಲ್ಪನಿಕ ಕಥೆಯಾಗಿದ್ದು, ಯಾರಿಗೂ ನೋವುಂಟು ಮಾಡುವ ಉದ್ದೇಶ ಇರಲಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry