ಕಾರಿಗೆ ಬೆಂಕಿ, ಇಬ್ಬರ ಸಜೀವ ದಹನ

7

ಕಾರಿಗೆ ಬೆಂಕಿ, ಇಬ್ಬರ ಸಜೀವ ದಹನ

Published:
Updated:

ಹಳೇಬೀಡು: ಇಲ್ಲಿಗೆ ಸಮೀಪದ ಪುಷ್ಪಗಿರಿ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ರಾತ್ರಿ ಕಾರೊಂದು ಸುಟ್ಟು ಕರಕಲಾಗಿದ್ದು, ಇಬ್ಬರು ಸಜೀವ ದಹನವಾಗಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ರಂಗನಗುಡ್ಡಪಲ್ಲಿ ನಿವಾಸಿ ಸಂಧ್ಯಾ (35) ಮತ್ತು ಹಾಸನ ಜಿಲ್ಲೆ ಸಮುದ್ರವಳ್ಳಿ ಗ್ರಾಮದ ಗಿರೀಶ (40) ಮೃತಪಟ್ಟವರು.

ಕಾರು ಸುಟ್ಟು ಕರಕಲಾಗಿರುವ ಕಾರಣ ನೋಂದಣಿ ಸಂಖ್ಯೆ ಗೊತ್ತಾಗಿಲ್ಲ. ಕಾರಿನ ಚಾಸಿ ಸಂಖ್ಯೆ ಆಧಾರದಲ್ಲಿ ಮೃತರ ಗುರುತು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಗಿರೀಶ ವಿವಾಹಿತನಾಗಿದ್ದು, ಮೃತ ಸಂಧ್ಯಾ ಅವರ ಪತಿ ಆಭರಣ ವರ್ತಕರು ಎಂದು ತಿಳಿದುಬಂದಿದೆ. ಕಾರು ಗಿರೀಶನಿಗೆ ಸೇರಿದ್ದಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry