3ನೇ ವಾರವೂ ಸೂಚ್ಯಂಕ ಏರಿಕೆ

7

3ನೇ ವಾರವೂ ಸೂಚ್ಯಂಕ ಏರಿಕೆ

Published:
Updated:
3ನೇ ವಾರವೂ ಸೂಚ್ಯಂಕ ಏರಿಕೆ

ಮುಂಬೈ: ದೇಶದ ಷೇರುಪೇಟೆಗಳು ಸತತ ಮೂರನೇ ವಾರವೂ ಗಳಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 216 ಅಂಶ ಏರಿಕೆ ಕಂಡು 35,444 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 71 ಅಂಶ ಹೆಚ್ಚಾಗಿ 10,768 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಕಂಡಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬುಧವಾರ ತನ್ನ ರೆಪೊ ದರಗಳನ್ನು ಹೆಚ್ಚಿಸುವ ಸಂದರ್ಭದಲ್ಲಿ ತಟಸ್ಥ ದೋರಣೆ ಕಾಯ್ದುಕೊಂಡಿತ್ತು. ಇದರಿಂದಾಗಿ ಸೂಚ್ಯಂಗಳು ಅಲ್ಪ ಏರಿಕೆಯನ್ನಷ್ಟೇ ಕಂಡುಕೊಳ್ಳಲು ಸಾಧ್ಯವಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ಷೇರುಗಳನ್ನು ಖರೀಸುತ್ತಿದ್ದಾರೆ. ಇದು ಸಕಾರಾತ್ಮಕ ಚಟುವಟಿಕೆಗೆ ಉತ್ತೇಜನ ನೀಡುತ್ತಿದೆ ಎಂದು ಪರಿಣತರು ಹೇಳಿದ್ದಾರೆ.

ಗುರುವಾರ ಮತ್ತು ಶುಕ್ರವಾರ ಚಂಚಲ ವಹಿವಾಟಿನಿಂದಾಗಿ ಸೂಚ್ಯಂಕಗಳು ಅಲ್ಪ ಇಳಿಕೆ ಕಂಡವು.

ಆರೋಗ್ಯಸೇವೆ, ಲೋಹ, ತೈಲ ಮತ್ತು ಅನಿಲ, ಐಟಿ, ತಂತ್ರಜ್ಞಾನ, ವಾಹನ ಮತ್ತು ರಿಯಲ್ ಎಸ್ಟೇಟ್‌ ವಲಯಗಳು ಉತ್ತಮ ಗಳಿಕೆ ಕಂಡುಕೊಂಡಿವೆ.

ವಿದ್ಯುತ್‌, ಭಾರಿ ಯಂತ್ರೋಪಕರಣ, ಗ್ರಾಹಕ ಬಳಕೆ ವಸ್ತುಗಳು, ಬ್ಯಾಂಕಿಂಗ್‌ ಮತ್ತು ಎಫ್‌ಎಂಸಿಜಿ ವಲಯಗಳು ಮಾರಾಟದ ಒತ್ತಡಕ್ಕೆ ಒಳಗಾದವು.

ಬಂಡವಾಳ ಹೊರಹರಿವು

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಹೆಚ್ಚು ಗಮನ ನೀಡುತ್ತಿದ್ದಾರೆ. ಇದರಿಂದಾಗಿ ಸೂಚ್ಯಂಕವು ಹೆಚ್ಚಿನ ಏರಿಕೆ ಕಾಣದಂತಾಗಿದೆ. ವಾರದ ವಹಿವಾಟಿನಲ್ಲಿ ₹ 2409 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry