ಜಿಎಸ್‌ಟಿ: ಅರ್ಧದಷ್ಟು ಮರುಪಾವತಿ

7
₹ 7 ಸಾವಿರ ಕೋಟಿ ಮೊತ್ತ ಸಂದಾಯ

ಜಿಎಸ್‌ಟಿ: ಅರ್ಧದಷ್ಟು ಮರುಪಾವತಿ

Published:
Updated:
ಜಿಎಸ್‌ಟಿ: ಅರ್ಧದಷ್ಟು ಮರುಪಾವತಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ರಫ್ತುದಾರರಿಗೆ ₹ 14 ಸಾವಿರ ಕೋಟಿ ಮರುಪಾವತಿ ಬಾಕಿ ಉಳಿದಿತ್ತು. ಅದರಲ್ಲಿ ₹ 7 ಸಾವಿರ ಕೋಟಿಯನ್ನು ನೀಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಮರುಪಾವತಿ ತ್ವರಿತಗೊಳಿಸಲು 2018ರ ಮೇ 31ರಿಂದ ಜೂನ್‌ 14ರವರೆಗೆ 15 ದಿನಗಳ ವಿಶೇಷ ಮರುಪಾವತಿ ಅವಧಿಯನ್ನು ನಿಗಿದಿಪಡಿಸಲಾಗಿದೆ. ಒಂಬತ್ತು ದಿನದಲ್ಲಿ ಅರ್ಧದಷ್ಟು ಮೊತ್ತ ಸಂದಾಯವಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ ಮಂಡಳಿ (ಸಿಬಿಐಸಿ) ತಿಳಿಸಿದೆ.

ಈ ಅವಧಿಯಲ್ಲಿ ರಫ್ತುದಾರರು ತಮ್ಮ ವ್ಯಾಪ್ತಿಗೆ ಬರುವ ಜಿಎಸ್‌ಟಿ ಕಚೇರಿ ಅಥವಾ ಕಸ್ಟಮ್ಸ್‌ ಇಲಾಖೆ ಅಥವಾ ಜಾಲಾತಣದ ಮೂಲಕ ಬಾಕಿ ಇರುವ ಮರುಪಾವತಿಯನ್ನು ಪಡೆಯುವಂತೆ ಸಿಬಿಐಸಿ ಸೂಚನೆ ನೀಡಿದೆ.

ರಿಟರ್ನ್ಸ್‌ ಹೊಂದಾಣಿಕೆ ಆಗದೇ ಇರುವುದೂ ಒಳಗೊಂಡು ಇನ್ನೂ ಹಲವು ಕಾರಣಗಳಿಂದಾಗಿ ರಫ್ತುದಾರರಿಗೆ ₹ 14 ಸಾವಿರ ಕೋಟಿ ಮರುಪಾವತಿಯಾಗದೇ ಬಾಕಿ ಉಳಿದಿತ್ತು. ಮರುಪಾವತಿ ವಿಳಂಬವಾಗುತ್ತಿರುವುದರಿಂದ ದುಡಿಯುವ ಬಂಡವಾಳದ ಕೊರತೆ ಎದುರಾಗಿದೆ. ಇದರಿಂದ ತಯಾರಿಕೆ ಸಾಧ್ಯವಾಗದೆ ನಷ್ಟವಾಗುತ್ತಿದೆ ಎಂದು ಉದ್ಯಮವಲಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತ್ವರಿತ ಮರುಪಾವತಿಗೆ ಕ್ರಮ ಕೈಗೊಳ್ಳುವಂತೆ ಬೇಡಿಕೆ ಸಲ್ಲಿಸಿದ್ದವು. ಹೀಗಾಗಿ ಮರುಪಾವತಿ ಪ್ರಕ್ರಿಯೆ ತ್ವರಿತಗೊಳಿಸಲು ಸಿಬಿಐಸಿ ಈ ವ್ಯವಸ್ಥೆ ಕಲ್ಪಿಸಿದೆ.

ಸಾಗಣೆ ಬಿಲ್‌ ಮತ್ತು ರಿಟರ್ನ್‌ ಅರ್ಜಿಯಲ್ಲಿ ನಮೂದಿಸಿರುವ ಜಿಎಸ್‌ಟಿಐಎನ್‌ನಲ್ಲಿ ಹೊಂದಾಣಿಕೆ ಆಗದೇ ಇದ್ದರೆ ಅಂತಹವರಿಗೆ ಪ್ಯಾನ್‌ ಮಾಹಿತಿ ಪಡೆದು ಮರುಪಾವತಿಗೆ ಅವಕಾಶ ಕಲ್ಪಿಸಲಾಗಿದೆ.

ಯಾರಿಗೆ ಮರುಪಾವತಿ

ಜಿಎಸ್‌ಟಿ ಕಾಯ್ದೆಯಡಿಯಲ್ಲಿ ನೋಂದಾಯಿತ ವರ್ತಕರಿಗೆ ಮಾತ್ರ ಮರುಪಾವತಿ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ. ನೋಂದಾವಣೆಗೊಳ್ಳದ ವರ್ತಕರು ಮರುಪಾವತಿಗೆ ಅರ್ಹರಲ್ಲ. ಜಿಎಸ್‌ಟಿ ಕಾಯ್ದೆಯ ಕಲಂ. 54 ರಿಂದ 56 ರವರೆಗೆ ಮತ್ತು ನಿಯಮ 89 ರಿಂದ 97 ರವರೆಗೆ ಮರುಪಾವತಿಯ ವಿವರಗಳನ್ನು ನೀಡಲಾಗಿದೆ. ನಮೂನೆ ಆರ್‌ಎಫ್‌ಡಿ-01 ರಲ್ಲಿ ಮರುಪಾವತಿಗಾಗಿ ಅರ್ಜಿ ಸಲ್ಲಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry