ಮ್ಯೂಚುವಲ್‌ ಫಂಡ್‌ ಸಂಪತ್ತು ಇಳಿಕೆ

7
ಸಾಲಪತ್ರಗಳಿಂದ ಬಂಡವಾಳ ಹೊರಹರಿವಿನ ಪರಿಣಾಮ

ಮ್ಯೂಚುವಲ್‌ ಫಂಡ್‌ ಸಂಪತ್ತು ಇಳಿಕೆ

Published:
Updated:

ನವದೆಹಲಿ: ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಸಂಪತ್ತು ಮೌಲ್ಯವು ಮೇ ತಿಂಗಳ ಅಂತ್ಯಕ್ಕೆ ₹ 66 ಸಾವಿರ ಕೋಟಿಗಳಷ್ಟು ಕಡಿಮೆ ಆಗಿದ್ದು, ₹ 22.60 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಏಪ್ರಿಲ್‌ ಅಂತ್ಯಕ್ಕೆ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಸಂಪತ್ತು ಮೌಲ್ಯ ₹ 23.25 ಲಕ್ಷ ಕೊಟಿ ಇತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಒಕ್ಕೂಟವು (ಎಎಂಎಫ್‌ಐ) ಮಾಹಿತಿ ನೀಡಿದೆ.

ಸರ್ಕಾರಿ ಸಾಲಪತ್ರಗಳು ಹಾಗೂ ಟ್ರೆಷರಿ ಬಿಲ್‌, ಠೇವಣಿ ಪ್ರಮಾಣ ಪತ್ರಗಳು ಹಾಗೂ ವಾಣಿಜ್ಯ ಸಾಲಪತ್ರಗಳಿಂದ ಬಂಡವಾಳ ಹೊರಹರಿವು ಹೆಚ್ಚಾಗಿದೆ. ಇದರಿಂದಾಗಿ ಸಂಪತ್ತು ಮೌಲ್ಯದಲ್ಲಿ ಇಳಿಕೆಯಾಗಿದೆ.

ಹೂಡಿಕೆದಾರರು ಮೇ ತಿಂಗಳಿನಲ್ಲಿ ₹ 50 ಸಾವಿರ ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಏಪ್ರಿಲ್‌ನಲ್ಲಿ ₹ 1.4 ಲಕ್ಷ ಕೋಟಿ ಹೂಡಿಕೆ ಮಾಡಿದ್ದರು.

ಉದ್ಯಮ ವೃದ್ಧಿ: ಮ್ಯೂಚುವಲ್‌ ಫಂಡ್‌ ವಹಿವಾಟಿಗೆ ಪ್ರವೇಶಿಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು  ಒಕ್ಕೂಟ ತಿಳಿಸಿದೆ.

ಏಪ್ರಿಲ್‌ ತಿಂಗಳಿನಲ್ಲಿ 8 ಲಕ್ಷ ಹೂಡಿಕೆದಾರರು ಈ ವಹಿವಾಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇದರಿಂದ ಒಟ್ಟು ಹೂಡಿಕೆದಾರರ ಸಂಖ್ಯೆ 7.22 ಕೋಟಿಗೆ ತಲುಪಿದೆ.

2017–18ರಲ್ಲಿ 1.6 ಕೋಟಿ ಹೂಡಿಕೆದಾರರು ವಹಿವಾಟಿಗೆ ಪ್ರವೇಶಿಸಿದ್ದರು. ಕೆಲವು ವರ್ಷಗಳಿಂದೀಚೆಗೆ ಸಣ್ಣ ನಗರಗಳಿಂದ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ. ಷೇರು ಸಂಬಂಧಿತ ಯೋಜನೆಗಳಲ್ಲಿಯೂ ಹೂಡಿಕೆಯಲ್ಲಿ ಏರಿಕೆ ಕಂಡುಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry