ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೂಸ್ಟಾರ್ ಹೊಸ ಉತ್ಪನ್ನ ಪೇಟೆಗೆ

Last Updated 9 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹವಾ ನಿಯಂತ್ರಿತ ಮತ್ತು ನೀರು ಶುದ್ಧೀಕರಣ ಯಂತ್ರಗಳ ತಯಾರಿಕಾ ಸಂಸ್ಥೆ ಬ್ಲೂಸ್ಟಾರ್, ಗೃಹ ಬಳಕೆಯ ನೀರು ಶುದ್ಧೀಕರಣದ ಹೊಸ ಯಂತ್ರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಯಂತ್ರಗಳು, ಆರ್‌ಒ, ಯುವಿ, ಆರ್‌ಒ+ಯುವಿ ಮತ್ತು ಆರ್‌ಒ+ಯುವಿ+ಯುಎಫ್‌ ತಂತ್ರಜ್ಞಾನಗಳನ್ನು ಒಳಗೊಂಡಿವೆ. ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುವಂತಹ ‘ಇಮ್ಯುನೊ ಬೂಸ್ಟ್‌’ ತಂತ್ರಜ್ಞಾನವನ್ನು ಇವುಗಳಲ್ಲಿ ಅಳವಡಿಸಲಾಗಿದೆ.

ಸಂಸ್ಥೆಯು, ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಸ್ಟೆಲ್ಲಾ, ಪ್ರಿಸ್ಮಾ, ಎಡ್ಜ್‌, ಇಂಪೀರಿಯಾ, ಎಲಿನಾರ್, ಮ್ಯಾಜೆಸ್ಟೊ, ಜೀನಿಯಾ, ಅರಿಸ್ಟೊ ಮತ್ತು ಪ್ರಿಸ್ಟಾನಾ ಹೆಸರಿನ ಒಟ್ಟು 35 ಮಾದರಿಗಳಲ್ಲಿ ಉಪಕರಣಗಳನ್ನು ತಯಾರಿಸಿದೆ. ಇವುಗಳಲ್ಲಿ ಕೆಲವೊಂದು ಇಮ್ಯುನೊ ಬೂಸ್ಟ್‌ ತಂತ್ರಜ್ಞಾನ ಒಳಗೊಂಡಿವೆ. ₹ 7,900ರಿಂದ ₹44,900ರವರೆಗೆ ದರ ನಿಗದಿಪಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕ, ಬಿ. ತ್ಯಾಗರಾಜನ್‌,  ‘ಸಂಸ್ಥೆಯು 75 ವರ್ಷಗಳಿಂದ ಗುಣಮಟ್ಟದ ಉಪಕರಣಗಳನ್ನು ತಯಾರಿಸುತ್ತಿದೆ. 2016ರಲ್ಲಿ ಗೃಹೋಪಯೋಗಿ ನೀರು ಶುದ್ಧೀಕರಣ ಯಂತ್ರಗಳ ತಯಾರಿಕೆ ಆರಂಭಿಸಿ ಯಶಸ್ಸು ಸಾಧಿಸಿದೆ. ಗ್ರಾಹಕ ಸ್ನೇಹಿ ಉಪಕರಣಗಳೊಂದಿಗೆ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT