ಸೋಮವಾರ, ಡಿಸೆಂಬರ್ 9, 2019
25 °C

2ನೇ ದಿನಕ್ಕೆ ಕಾಲಿಟ್ಟ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2ನೇ ದಿನಕ್ಕೆ ಕಾಲಿಟ್ಟ ಧರಣಿ

ಬೆಂಗಳೂರು: ವರ್ತೂರಿನಿಂದ ಮಾರತ್ತಹಳ್ಳಿ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಪಣತ್ತೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ಕಾರಣ ಕೆಳ ಸೇತುವೆ ಹಾಗೂ ರಸ್ತೆಯನ್ನು ವಿಸ್ತರಿಸುವಂತೆ ಗ್ರಾಮಸ್ಥರು ಕೈಗೊಂಡಿರುವ ನಿರಾಹಾರ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

‘ಹಲವು ವರ್ಷಗಳಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಗ್ರಾಮಸ್ಥರ ಆರೋಗ್ಯ ಹದಗೆಡುತ್ತಿದ್ದರೂ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಈ ಕಡೆ ಸುಳಿದಾಡಿಲ್ಲ’ ಎಂದು ಧರಣಿ ನಿರತ ಸರ್ವೇಶ್‌ರೆಡ್ಡಿ ಅವರು ಹೇಳಿದರು.

‘ಸ್ಥಳೀಯ ಶಾಸಕರು ಇಲ್ಲವೇ ಅಧಿಕಾರಿಗಳು ಸಮಸ್ಯೆ ಬಗೆಹರಿಸುವುದಾಗಿ ಬರೆದುಕೊಡುವವರೆಗೂ ನಾವು ಹೋರಾಟ ಕೈಬಿಡುವುದಿಲ್ಲ’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)