ಸೋಮವಾರ, ಡಿಸೆಂಬರ್ 9, 2019
22 °C

‘ಲೈವ್‌ಬ್ಯಾಂಡ್‌ಗಳ ವಿರುದ್ಧ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಅಕ್ರಮ ಚುಟವಟಿಕೆ ನಡೆಸುವ ಲೈವ್‌ಬ್ಯಾಂಡ್‌ಗಳ ವಿರುದ್ಧ ಕ್ರಮ ಜರುಗಿಸುವಂತೆ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ ಕುಮಾರ್ ಎಲ್ಲ ಠಾಣೆಗಳಿಗೂ ಸುತ್ತೋಲೆ ಕಳುಹಿಸಿದ್ದಾರೆ.‌

ಸುಪ್ರೀಂ ಕೋರ್ಟ್ ಆದೇಶದನ್ವಯ ಲೈವ್‌ಬ್ಯಾಂಡ್‌ಗಳು ಕಾರ್ಯನಿರ್ವಹಿಸಬೇಕು ಮತ್ತು ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿರುವ ಲೈವ್‌ಬ್ಯಾಂಡ್‌ ಕುರಿತುವರದಿ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

‘ಲೈವ್‌ಬ್ಯಾಂಡ್‌ಗಳ ಮಾರ್ಗಸೂಚಿ ಜಾರಿಗೆ ಡಿಸಿಪಿಗಳಿಗೆ ಸೂಚಿಸಿದ್ದೇವೆ. ಈಗಾಗಲೇ ಅವರು ಮಾಲೀಕರೊಂದಿಗೆ ಸಭೆ ನಡೆಸಿದ್ದಾರೆ’ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

‘ಪೂರ್ವ ವಿಭಾಗದಲ್ಲಿ4 ಲೈವ್‌ಬ್ಯಾಂಡ್‌ಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಪರಿಚಾರಕಿಯರು ಆಶ್ಲೀಲ ನೃತ್ಯ ಪ್ರದರ್ಶನ ಮಾಡುವಂತಿಲ್ಲ, ಪುರುಷ ಗ್ರಾಹಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕು, ಪರಿಚಾರಕಿಯರು ಸಮವಸ್ತ್ರ ಧರಿಸಿರಬೇಕು, ಗ್ರಾಹಕರು ಅವರ ಮೇಲೆ ನೋಟುಗಳನ್ನು ತೂರುವಂತಿಲ್ಲ ಮತ್ತು ಅವರ ರಕ್ಷಣೆಗೆ ಮುನ್ನಚ್ಚರಿಕೆ ವಹಿಸಬೇಕು. ಹೀಗೆ ಹಲವು ನಿಯಮಗಳನ್ನು ಕೋರ್ಟ್‌ ರೂಪಿಸಿದೆ’ ಎಂದರು.

‘ಮುಂಬೈ ಸೇರಿ ಅನೇಕ ನಗರಗಳಲ್ಲಿ ಲೈವ್‌ಬ್ಯಾಂಡ್‌ಗಳ ನಿಷೇಧ ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಕಾನೂನು ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸಬೇಕು ಎಂದು ಲೈವ್ ಬ್ಯಾಂಡ್ ಮಾಲೀಕರಿಗೆ ಸೂಚಿಸಿ, ಆದೇಶ ಹೊರಡಿಸಿತ್ತು.

ಪ್ರತಿಕ್ರಿಯಿಸಿ (+)