ಸಿಡಿಲಿಗೆ 26 ಬಲಿ

7

ಸಿಡಿಲಿಗೆ 26 ಬಲಿ

Published:
Updated:

ಲಖನೌ: ಉತ್ತರ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಸಿಡಿಲು ಮತ್ತು ದೂಳಿನ ಬಿರುಗಾಳಿಗೆ 26 ಜನರು ಬಲಿಯಾಗಿದ್ದಾರೆ.

ಸುಲ್ತಾನಪುರದಲ್ಲಿ ಮೈದಾನದಲ್ಲಿ ಆಡುತ್ತಿದ್ದ ಮೂವರು ಮಕ್ಕಳು ಸೇರಿ ಒಟ್ಟು ಐವರು ಸಿಡಿಲಿಗೆ ಬಲಿಯಾಗಿದ್ದಾರೆ. ಮಳೆಯಿಂದಾಗಿ ಮರದಡಿ ಆಶ್ರಯ ಪಡೆದಿದ್ದ ಆರು ಜನರು ಸಿಡಿಲು ಬಡಿದು ಗಾಯಗೊಂಡಿದ್ದಾರೆ.

ಜೌನಾಪುರದಲ್ಲಿ ಐವರು, ಉನ್ನಾವೊದಲ್ಲಿ ನಾಲ್ವರು, ಚಂದೌಲಿ ಮತ್ತು ಬಹ್ರೇಚ್‌ನಲ್ಲಿ ತಲಾ ಮೂವರು, ರಾಯ್‌ ಬರೇಲಿಯಲ್ಲಿ ಇಬ್ಬರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೂ ಹಲವರು ಮೃತಪಟ್ಟಿದ್ದಾರೆ.ಗುರುವಾರ ಕೂಡ ರಾಜ್ಯದಲ್ಲಿ ಐವರು ಸಿಡಿಲಿಗೆ ಬಲಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry