ಚೀನಾದಲ್ಲಿ ಪಾಕ್ ಅಧ್ಯಕ್ಷ ಮಮ್ನೂನ್ ಹುಸೇನ್‌ಗೆ ಹಸ್ತಲಾಘವ ನೀಡಿದ ಮೋದಿ

7

ಚೀನಾದಲ್ಲಿ ಪಾಕ್ ಅಧ್ಯಕ್ಷ ಮಮ್ನೂನ್ ಹುಸೇನ್‌ಗೆ ಹಸ್ತಲಾಘವ ನೀಡಿದ ಮೋದಿ

Published:
Updated:

ಕಿಂಗ್ಡಾವೋ/ಚೀನಾ: ಶಾಂಘೈ ಸಹಕಾರ ಸಂಘಟನೆಯ 18ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪಾಕಿಸ್ತಾನ ಅಧ್ಯಕ್ಷ ಮಮ್ನೂನ್ ಹುಸೇನ್ ಅವರಿಗೆ ಹಸ್ತಲಾಘವ ನೀಡಿದರು.

ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ (ಎಸ್‌ಸಿಒ) ಭಾರತದ ಪ್ರಧಾನಿಯೊಬ್ಬರು ಭಾಗವಹಿಸುತ್ತಿರುವುದು ಇದೇ ಮೊದಲು. ಶಾಂಘೈ ಸಹಕಾರ ಸಂಘಟನೆಯ ಸದಸ್ಯ ದೇಶಗಳ ಮುಖಂಡರು ಈ ಸಭೆಗೆ ಆಗಮಿಸಿದ್ದಾರೆ. ಶೃಂಗಸಭೆಯ ಪತ್ರಿಕಾಗೋಷ್ಠಿಯ ವೇಳೆ ಪ್ರಧಾನಿ ಮೋದಿ ಅವರು ಮಮ್ನೂನ್ ಹುಸೇನ್ ಅವರಿಗೆ ಹಸ್ತಲಾಘವ ನೀಡಿ ಪರಸ್ಪರ ಉಭಯಕುಶಲೋಪರಿ ವಿಚಾರಿಸಿದರು.

ಭಯೋತ್ಪಾದನೆ, ಪ್ರತ್ಯೇಕತಾವಾದ, ತೀವ್ರವಾದಗಳನ್ನು ತೊಡೆದುಹಾಕುವುದು. ಆ ಮೂಲಕ ವಾಣಿಜ್ಯ, ಕಾನೂನು, ಆರೋಗ್ಯ, ಕೃಷಿ, ಪ್ರಾದೇಶಿಕ ಸಂಪರ್ಕ, ಪರಿಸರ ಸಂರಕ್ಷಣೆ–ವಿಕೋಪ ನಿರ್ವಹಣೆ ಹಾಗೂ ಸದಸ್ಯ ರಾಷ್ಟ್ರಗಳ ಜನರ ಮಧ್ಯೆ ಸಂಬಂಧವನ್ನು ವೃದ್ಧಿಸುವ ಕಾರ್ಯಸೂಚಿಯನ್ನು ಎಸ್‌ಸಿಒ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry